ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಕ್ಕೆ ಮತ್ತೆ ಕೋವಿಡ್ ವಕ್ಕರಿಸಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಮೊದಲ ಕೇಸ್ ವರದಿಯಾಗಿದ್ದು, ಸ್ಪರ್ಶ ಮಕ್ಕಳಧಾಮದ ಮಗುವಿಗೆ ಕೊರೋನಾ ಸೋಂಕು ತಗುಲಿದೆ.
ದೇವನಹಳ್ಳಿಯ ನಲ್ಲೂರು ಬಳಿ ಇರುವ ಸ್ಪರ್ಶ ಮಕ್ಕಳಧಾಮದಲ್ಲಿ 21 ಮಕ್ಕಳಿದ್ದಾರೆ. ಒಂದು ಮಗುವಿಗೆ ಕೆಮ್ಮು, ಜ್ವರ, ಶೀತ ಹಾಗೂ ಉಸಿರಾಟದ ತೊಂದರೆಯಾಗಿದೆ.
ಪರೀಕ್ಷೆಯಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಗುವನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ. ಇನ್ನುಳಿದ ಮಕ್ಕಳಿಗೂ ಟೆಸ್ಟಿಂಗ್ ನಡೆದಿದೆ. ಇಡೀ ಶಾಲೆ ಹಾಗೂ ಮಕ್ಕಳ ಧಾಮದೊಳಗೆ ಸ್ಯಾನಿಟೈಸ್ ಸ್ಪ್ರೇ ಮಾಡಲಾಗುತ್ತದೆ.
ಟೆಸ್ಟ್ ರಿಸಲ್ಟ್ ಬರುವವರೆಗೂ ಮಕ್ಕಳನ್ನು ಹೋಂ ಕ್ಯಾರೆಂಟೀನ್‌ನಲ್ಲಿ ಇಡಲಾಗಿದೆ.