ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಮಟಾ ತಾಲೂಕಿನ ಮಿರ್ಜಾನ್ ಹೆಗಡೆ ತಾರಿಬಾಗಿಲ ಗ್ರಾಮಗಳನ್ನು ಸಂಪರ್ಕಿಸಲು ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿದೆ.
ಪಿಲ್ಲರ್‌ಗಳ ನಡುವೆ ಸೇತುವೆಗೆ ಹಾಕಲಾಗಿದ್ದ ಸ್ಲ್ಯಾಬ್ ಕುಸಿತವಾಗಿದ್ದು, ಬಹುವರ್ಷಗಳ ಜನರ ಬೇಡಿಕೆ ಮಣ್ಣು ಪಾಲಾಗಿದೆ. ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಸೇತುವೆ ಕುಸಿದಿದ್ದು, ಅದರ ಕೆಳಗಿದ್ದ ಟ್ರಕ್, ಜೆಸಿಬಿ, ಹಾಗೂ ಕಾರು ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಕಳಪೆ ಕಾಮಗಾರಿ ಎಂದು ಗ್ರಾಮಸ್ಥರು ದೂಷಿಸಿದ್ದಾರೆ.