ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ತಿನ್ನುವ ಆಹಾರ ಸರಿಯಿಲ್ಲದಿದ್ದರೆ, ಎಷ್ಟೇ ವ್ಯಾಯಾಮ ಮಾಡಿದರೂ, ಜಿಮ್‌ನಲ್ಲಿ ಬೆವರು ಹರಿಸಿದರೂ, ಯೋಗಾಭ್ಯಾಸ ಮಾಡಿದರೂ ಅದರ ಲಾಭವನ್ನು ಪಡೆಯಲು ನೀವು ನಿಮ್ಮ ಆಹಾರಕ್ರಮದ ಬಗ್ಗೆ ಗಮನ ಹರಿಸಬೇಕು.
ನಿಮ್ಮ ದೈನಂದಿನ ವ್ಯಾಯಾಮ ಮತ್ತು ಯೋಗಾಭ್ಯಾಸದ ನಂತರ ಈ ಆರೋಗ್ಯಕರ ಪಾನೀಯಗಳನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಡಿಟಾಕ್ಸ್ ಡ್ರಿಂಕ್ಸ್ ಸಹಾಯ ಮಾಡುತ್ತದೆ.
ಬೇಕಾಗುವ ಪದಾರ್ಥಗಳು :
ಬೀಟ್ ರೂಟ್- ಒಂದು
ನಿಂಬೆ ಹಣ್ಣಿನ ರಸ- 2 ಚಮಚ
ದ್ರಾಕ್ಷಿ ರಸ- 1 ಕಪ್
ಶುಂಠಿ- ಸ್ವಲ್ಪ
ಗ್ರೀನ್ ಆಪಲ್- ಒಂದು
ಡಿಟಾಕ್ಸ್ ಡ್ರಿಂಕ್ಸ್ ಮಾಡುವ ವಿಧಾನ :
ಮೊದಲು ಬೀಟ್ ರೂಟ್, ಗ್ರೀನ್ ಆಪಲ್ ಮತ್ತು ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ.
ನಂತರ ಗ್ರೀನ್ ಆ್ಯಪಲ್ ಮತ್ತು ಬೀಟ್ ರೂಟ್ ನ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಶುಂಠಿಯ ಸಿಪ್ಪೆ ತೆಗೆದು ಈಗ ಕಟ್ ಮಾಡಿರುವ ಹಣ್ಣುಗಳನ್ನು ಮಿಕ್ಸಿ ಜಾರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ರುಬ್ಬಿದ ಮಿಶ್ರಣವನ್ನು ಒಂದು ಗ್ಲಾಸ್ ಜಾರ್ ಗೆ ಶೋಧಿಸಿ ಹಾಕಿ, ಇದಕ್ಕೆ ನಿಂಬೆ ರಸ ಮತ್ತು ದ್ರಾಕ್ಷಿ ರಸವನ್ನು ಬೆರೆಸಿ ಮಿಕ್ಸ್ ಮಾಡಿದರೆ ಡಿಟಾಕ್ಸ್ ಡ್ರಿಂಕ್ಸ್ ಕುಡಿಯಲು ಸಿದ್ದ.