ತುಮಕೂರು ಹನಿಟ್ರ್ಯಾಪ್ ಪ್ರಕರಣ: ಇಬ್ಬರು ಮಹಿಳೆಯರ ಬಂಧನ

ಹೊಸದಿಗಂತ ವರದಿ, ತುಮಕೂರು ( ಗುಬ್ಬಿ ) : 

ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಕೆಲ ಯುವಕರು ಹಾಗೂ ಮಹಿಳೆಯರು ಸೇರಿ ಗುಬ್ಬಿ ಪಟ್ಟಣದಲ್ಲಿನ ಹಣವಂತ ವ್ಯಕ್ತಿಗಳನ್ನ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಖೆಡ್ಡಕ್ಕೆ ವ್ಯವಸ್ಥಿತವಾಗಿ ಬೀಳಿಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ನಿಶಾ ಎಂಬ ಮಹಿಳೆಯು ಫೇಸಬುಕ್ ನಲ್ಲಿ ಸ್ನೇಹಿತೆಯಾಗಿ ನಂತರ ನಿನ್ನನ್ನು ಪ್ರೀತಿ ಮಾಡುತ್ತಿದ್ದೇನೆ ಹಾಗಾಗಿ ನನ್ನನ್ನು ಮದುವೆಯಾಗು ಎಂದು ದುಂಬಾಲು ಬಿದ್ದಿದ್ದರಿಂದ ಎಚ್ಚೆತುಕೊಂಡ ರಿಯಲ್ ಎಸ್ಟೇಟ್ ಉದ್ಯಮಿ ಜಿ. ಎನ್ ಅಣ್ಣಪ್ಪ ಸ್ವಾಮಿಯು ಮದುವೆಗೆ ಒಪ್ಪದಿದ್ದಾಗ ಪ್ಲಾನ್ ಮಾಡಿ ಈ ವ್ಯಕ್ತಿಯನ್ನು ಜಮೀನಿನ ವಿಚಾರವಾಗಿ ನೆಲಮಂಗಕ್ಕೆ ಬನ್ನಿ ಎಂದು ಕರೆದು ದೊಡ್ಡಬಳ್ಳಾಪುರ ಕಡೆ ಹೋಗಿ ಬೆಳವಂಗಳ ಬಳಿ ಮೊದಲೇ ಯೋಜನೆ ರೂಪಿಸಿಕೊಂಡ ರೀತಿಯಲ್ಲೇ ಅಣ್ಣಪ್ಪ ಸ್ವಾಮಿಯನ್ನು ಹೋಟೆಲ್ ಗೆ ಕೆರೆದುಕೊಂಡು ಹೋಗಿದ ಸಂದರ್ಭ ಸ್ಥಳಕ್ಕೆ ಬಂದ ಭರತ್, ಬಸವರಾಜು ಎಂಬ ಯುವಕರು ಇವರನ್ನು ಥಳಿಸಿ, ಅರೆ ಬೆತ್ತಲೆ ಮಾಡಿ ಫೋಟೋ ವಿಡಿಯೋ ಮಾಡಿಕೊಂಡು ಇಪ್ಪತ್ತು ಲಕ್ಷ ಹಣಕ್ಕೆ ಬೇಡಿಕೆ ಇಡುತ್ತಾರೆ. ಇದಕ್ಕೆ ಒಪ್ಪದೇ ಇದ್ದುದ್ದರಿಂದ ಈ ವ್ಯಕ್ತಿಯ ಘನತೆ ಗೌರವವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತೇವೆ ಎಂದು ಎದುರಿಸಿದ್ದಾರೆ.

ಹನಿಟ್ರ್ಯಾಪ್ ಗೆ ಒಳಗಾದ ವ್ಯಕ್ತಿ ಅಣ್ಣಪ್ಪಸ್ವಾಮಿಯು ಗುಬ್ಬಿ ಪೊಲೀಸ್ ಸ್ಟೇಷನ್ ಗೆ ಬಂದು ದೂರು ನೀಡಿದ್ದಾರೆ. ದೂರು ಪಡೆದ ಪೊಲೀಸರು ಪತ್ತೆ ಕಾರ್ಯವನ್ನು ಚುರುಕು ಗೊಳಿಸಿದ್ದರಿಂದ ಹನಿಟ್ರ್ಯಾಪ್ ನಲ್ಲಿದ್ದ ಮಹಿಳೆಯರಾದ ನಿಶಾ, ಹಾಗೂ ಜ್ಯೋತಿ ಎಂಬುವವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಗುಬ್ಬಿ ಪಟ್ಟಣದಲ್ಲಿ ನಡೆದ ದಲಿತ ಮುಖಂಡ ನರಸಿಂಹಮೂರ್ತಿ ಅವರ ಕೊಲೆ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಶಿಕ್ಷೆಗೆ ಒಳಗಾಗಿ ಜಾಮೀನಿನ ಮೇಲೆ ಹೊರಗಡೆಯಿದ್ದ ಭರತ್, ಬಸವರಾಜು ಎಂಬ ಈ ಇಬ್ಬರು ಯುವಕರು ಈ ಹನಿಟ್ರ್ಯಾಪ್ ಮೂಲ ರೂವಾರಿಗಳಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!