ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಟೇಲ್ ಒಂದರ ವಾಶ್‌ರೂಮ್‌ನಲ್ಲಿ ಆರು ನಿಮಿಷಗಳ ಕಾಲ ಇದ್ದ ಕಾರಣಕ್ಕೆ 800 ರೂಪಾಯಿ ಬಿಲ್ ಮಾಡಲಾಗಿದೆ.
ಹೌದು, ಎಷ್ಟೇ ಕ್ಲೀನ್ ಇರುವ ವಾಶ್‌ರೂಮ್ ಆದರೂ 10-20 ರೂಪಾಯಿಗಿಂತ ಹೆಚ್ಚು ಹಣ ಪಡೆಯೋದಿಲ್ಲ. ಇನ್ನು ಬರೀ ಆರು ನಿಮಿಷ ಇದ್ದಿದ್ದಕ್ಕೆ ಇಷ್ಟೊಂದು ಹಣ ಕೇಳಿದ್ದಕ್ಕೆ ಗ್ರಾಹಕರು ಗರಂ ಆಗಿದ್ದಾರೆ.
Megha upadhyay ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇದರಲ್ಲಿ ಮಹಿಳೆಯೊಬ್ಬರು ತಮಗಾದ ಕಹಿ ಅನುಭವವನ್ನು ವಿವರವಾಗಿ ಬರೆದುಕೊಂಡಿರುವುದನ್ನು ಕಾಣಬಹುದು. ಪೋಸ್ಟ್ ನಲ್ಲಿ, ‘ನನ್ನ ತಾಯಿಯ ಆಸೆಯಂತೆ ರಾಜಸ್ಥಾನದ ಪ್ರಸಿದ್ಧ ದೇವಾಲಯಕ್ಕೆ ಕುಟುಂಬ ಸಮೇತವಾಗಿ ಹೋಗಿದ್ದೆವು. ಅಲ್ಲಿ ಎರಡು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹಿಂತಿರುಗುವಾಗ ದಾರಿಯ ಮಧ್ಯದಲ್ಲಿ ನನ್ನ ತಾಯಿ ಇದ್ದಕ್ಕಿದ್ದಂತೆ ಅಸ್ವಸ್ಥರಾದರು.
ವಾಕರಿಕೆ, ಹೊಟ್ಟೆ ನೋವು ಹಾಗೂ ವಾಂತಿ ಶುರುವಾಯಿತು. ಆ ವೇಳೆಯಲ್ಲಿ ಅಲ್ಲಿಯೇ ಸುತ್ತ ಮುತ್ತಲೂ ಶೌಚಾಲಯಕ್ಕಾಗಿ ಹುಡುಕಿದೆವು. ಆದರೆ ಒಂದು ಶೌಚಾಲಯವು ಸ್ವಚ್ಛವಾಗಿರಲಿಲ್ಲ. ಹೀಗಾಗಿ ದೇವಸ್ಥಾನದ ಒಂದು ಕಿಮೀ ಸುತ್ತಲಿನಲ್ಲಿ ಒಂದೇ ಒಂದು ಶೌಚಾಲಯವಿರಲಿಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ನನ್ನ ತಾಯಿಗೆ ನಿಲ್ಲಲು ಸಾಧ್ಯವಾಗದಂತಾಗಿತ್ತು.
ಈ ವೇಳೆಯಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಹೋಟೆಲ್‌ಗೆ ಹೋಗಿ ನಮಗೆ ರೂಮ್ ಬೇಡ, ಐದು ಹತ್ತು ನಿಮಿಷಗಳ ಕಾಲ ಶೌಚಾಲಯ ಮಾತ್ರ ಅಗತ್ಯವಿದೆ ದಯವಿಟ್ಟು ಕೊಡಿ ಎಂದು ಕೇಳಿಕೊಂಡೆವು. ಆಕೆಯನ್ನು ನೋಡಿದ ಹೋಟೆಲ್ ಸಿಬ್ಬಂದಿಯೂ ಇದಕ್ಕೆ ಒಪ್ಪಿತು. ಆ ಬಳಿಕ ಬಿಲ್ ಕೊಡಲು ಕೇಳಿದ್ದಕ್ಕೆ ನನ್ನ ಜೊತೆಗೆ ಏರುಧ್ವನಿಯಲ್ಲಿ ಮಾತನಾಡಲು ಶುರು ಮಾಡಿದರು. ನೂರು ರೂಪಾಯಿ ಕೊಡಿ ಬಿಲ್ ಕೊಡುವೆ ಎಂದರು.
ಕೊನೆಗೆ ಬಿಲ್ ಕೊಟ್ಟರಾದರೂ, ಆರು ನಿಮಿಷಗಳ ಶೌಚಾಲಯ ಬಳಸಿದ್ದಕ್ಕೆ 800 ರೂ ಶುಲ್ಕ ವಿಧಿಸಿದ್ದನ್ನು ನೋಡಿ ಶಾಕ್ ಆಯಿತು. ಅದಲ್ಲದೇ ಈ ಹೋಟೆಲ್ ಸಿಬ್ಬಂದಿಗಳಲ್ಲಿ ಶುಲ್ಕದ ಕೇಳಿಕೊಂಡರೂ ಮಾನವೀಯತೆ ತೋರಲೇ ಇಲ್ಲ. ಅಷ್ಟು ಮೊತ್ತವನ್ನು ಪಾವತಿಸುವಂತೆ ಹೇಳಿದರು. ಕೊನೆಗೆ ನನ್ನ ತಂದೆ 805 ರೂ. ಬಿಲ್ ಹಣ ಕಟ್ಟಿದರು, ಆ ಬಳಿಕ ಅಲ್ಲಿಂದ ಹೊರಟೆವು. ಆದರೆ, ಆರು ನಿಮಿಷಗಳ ಕಾಲ ಶೌಚಾಲಯ ಬಳಸಿದ್ದಕ್ಕಾಗಿ 805 ರೂ. ಕೊಟ್ಟಿದ್ದೇವೆ. ಈ ಕ್ಯಾಲುಕುಲೇಷನ್ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.