PM @ 8 pm | ಆಪರೇಷನ್‌ ಸಿಂದೂರ್‌ ನಿಂತಿಲ್ಲ. ಕೇವಲ ಸದ್ಯಕ್ಕೆ ಸ್ಥಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಆಪರೇಷನ್‌ ಸಿಂದೂರ್‌ ದೇಶದ ಮಹಿಳೆಯರಿಗೆ ಅರ್ಪಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆಪರೇಷನ್‌ ಸಿಂದೂರ್‌ ಬಳಿಕ ಇದೇ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ದಾಳಿಯಿಂದ ಪಾಕಿಸ್ತಾನ ಹತಾಶೆಗೊಂಡಿದೆ. ನಮ್ಮ ದಾಳಿಗೆ ಹೆದರಿದ ಪಾಕಿಸ್ತಾನ ಜಗತ್ತಿನ ಮುಂದೆ ಕಣ್ಣೀರಿಟ್ಟಿತು ಎಂದು ತಿಳಿಸಿದ್ದಾರೆ.

ಭಾರತಕ್ಕೆ ನ್ಯೂಕ್ಲಿಯರ್‌ ದಾಳಿಯ ಬ್ಲ್ಯಾಕ್‌ಮೇಲ್‌ಗೆ ಭಾರತ ಬಗ್ಗೋದಿಲ್ಲ. ಆಪರೇಷನ್‌ ಸಿಂದೂರ್‌ ನಿಂತಿಲ್ಲ. ಕೇವಲ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಉಗ್ರರ ದಾಳಿಗೆ ಯುದ್ಧದ ಮೂಲಕವೇ ಉತ್ತರಿಸಲಾಗುತ್ತದೆ. ಭಯೋತ್ಪಾದನೆ ಸಹಿಸುವ ಮಾತೇ ಇಲ್ಲ. ಉಗ್ರರನ್ನು ಅನ್ನ ಆಹಾರ, ಆಶ್ರಯ ನೀಡಿ ಉಗ್ರರನ್ನು ಪೋಷಣೆ ನೀಡುತ್ತಿರುವ ಪಾಕಿಸ್ತಾನ ಒಂದು ದಿನ ಭಯೋತ್ಪಾದನೆಯಿಂದಲೇ ಸರ್ವನಾಶ ಆಗುತ್ತದೆ. ರಣರಂಗದಲ್ಲಿ ಭಾರತ ಎಂದಿಗೂ ಸೋತಿಲ್ಲ. ಇದು ಯುದ್ಧದ ಸಮಯ ಅಲ್ಲ.. ಅಂತೆಯೇ ಭಯೋತ್ಪಾದನೆಯ ಸಮಯವೂ ಅಲ್ಲ ಎಂದರು.

ಇಂದು ಬುದ್ಧ ಪೂರ್ಣಿಮೆ. ಬುದ್ಧ ನಮಗೆ ಶಾಂತಿಯನ್ನು ಬೋಧಿಸಿದ್ದಾನೆ. ಪ್ರತಿಯೊಬ್ಬ ಭಾರತೀಯ ಶಾಂತಿಯಿಂದ ಬದುಕಲು ಶಕ್ತಿಯ ಉಪಯೋಗವೂ ಮುಖ್ಯ. ನೀರು ಮತ್ತು ರಕ್ತ ಜೊತೆ ಜೊತೆಗೆ ಹರಿಯಲು ಸಾಧ್ಯವಿಲ್ಲ. ಅಂತೆಯೇ ವ್ಯಾಪಾರ ಮತ್ತು ಉಗ್ರವಾದ ಜೊತೆಗಿರಲು ಸಾಧ್ಯವಿಲ್ಲ. ಪಾಕಿಸ್ತಾನ ಉಗ್ರರನ್ನು ನಿರ್ಣಾಮ ಮಾಡಲೇಬೇಕು ಎಂದು ಪಾಕ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!