ಹೊಸದಿಗಂತ ವರದಿ ಮುಂಡಗೋಡ:
ಸೋಮವಾರ ಸಾಯಂಕಾಲದಿಂದ ಆರಂಭವಾದ ದಿಢೀರ್ ಬಂದ ಗುಡುಗು ಮಿಂಚು ಸಹಿತ ಒಂದು ಗಂಟೆ ಸುರಿದ ಮಳೆಗೆ ಪಟ್ಟಣದ ಬಂಕಾಪೂರ ರಸ್ತೆ ಮತ್ತೆ ಜಲಾವೃತವಾಗಿದೆ. ವಾಹನ ಸಂಚಾರಕ್ಕೆ ಅಡಚಣೆಯಾಗಿ ವಾಹನ ಸವಾರರು ಚರಂಡಿಯಿಂದ ರಸ್ತೆಯ ಮೇಲೆ ಬಂದ ನೀರಿನಲ್ಲೆ ಓಡಾಡಬೇಕಾಗಿದೆ.
ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಬಂಕಾಪೂರ ರಸ್ತೆಯಲ್ಲಿ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು ಕೂಡ ಚರಂಡಿ ನೀರಲ್ಲಿ ಮೈಮೇಲಿದ್ದ ಬಟ್ಟೆಗಳನ್ನು ಒದ್ದೆಮಾಡಿಕೊಂಡು ಓಡಾಡುತ್ತಿರುವು ಕಂಡು ಬಂದಿತು.
ಸೋಮವಾರದ ಸಂತೆ ಇಂದು ಆಗಿದ್ದರಿಂದ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಕ್ಕೆ ಹೊದಿಸಿದ ಪ್ಲಾಸ್ಟಿಕ್ ಹಾರಿ ಹೋಗಿ ವ್ಯಾಪಾರಸ್ಥರು ವ್ಯಾಪಾರ ಮಾಡಲಾಗದಂತೆ ಮಳೆಯ ಅಬ್ಬರಕ್ಕೆ ಖಾಸಗಿ ಕಟ್ಟಡಗಳ ಕೆಲಗೆ ನಿಂತು ಮಳೆಯಿಂದ ರಕ್ಷಣೆ ಪಡೆದರೆ ಸಂತೆಗೆ ಬಂದ ಗ್ರಾಹಕರು ಮಾರುಕಟ್ಟೆಯ ತುಂಬ ಮಳೆಯಿಂದ ರಕ್ಷಿಸಿಕೊಳ್ಳಲು ಅಲೆದಾಡಿದರು ಇಂದು ಸುರಿದ ಒಂದು ಗಂಟೆ ಸುರಿದ ಮಳೆಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಯಿತು