ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂಧೂರ, ಭಾರತ, ಪಾಕಿಸ್ತಾನದ ಕದನ ವಿರಾಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.
ಇನ್ನು ಪಾಕ್ ಜತೆ ಮಾತುಕತೆ ಏನಿದ್ದರೂ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿಪಾಕ್‌ಗೆ ಕಠಿಣ ಸಂದೇಶ ರವಾನಿಸಿದ್ದಾರೆ.
ಭಾರತದ ದಾಳಿಯಿಂದ ಪಾಕಿಸ್ತಾನ ಹತಾಶೆಗೊಂಡಿದೆ.ಉಗ್ರರನ್ನು ಮಟ್ಟ ಹಾಕಲು ಭಾರತಕ್ಕೆ ಬೆಂಬಲ ಕೊಡುವ ಬದಲು ನಮ್ಮ ಮೇಲೆಯೇ ದಾಳಿಗೆ ಪಾಕಿಸ್ತಾನ ಯತ್ನಿಸಿತ್ತು. ಪಾಕಿಸ್ತಾನ ಗಡಿಯಲ್ಲಿ ಯುದ್ಧಕ್ಕೆ ಸಜ್ಜಾಗಿತ್ತು. ಆದರೆ ಭಾರತ ಅವರ ತಲೆಯ ಮೇಲೆಯೇ ಹೊಡೆದಿದೆ ಎಂದು ಹೇಳಿದರು..
ಪ್ರತಿಯೊಬ್ಬ ಭಾರತೀಯ ಶಾಂತಿಯಿಂದ ಬದುಕಲು ಶಕ್ತಿಯ ಉಪಯೋಗವೂ ಮುಖ್ಯ. ನೀರು ಮತ್ತು ರಕ್ತ ಜೊತೆ ಜೊತೆಗೆ ಹರಿಯಲು ಸಾಧ್ಯವಿಲ್ಲ. ಅಂತೆಯೇ ವ್ಯಾಪಾರ ಮತ್ತು ಉಗ್ರವಾದ ಜೊತೆಗಿರಲು ಸಾಧ್ಯವಿಲ್ಲ. ಪಾಕಿಸ್ತಾನ ಉಗ್ರರನ್ನು ನಿರ್ಣಾಮ ಮಾಡಲೇಬೇಕು ಎಂದು ಪಾಕ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.