ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ ಎರಡೇ ಗಂಟೆಯಲ್ಲಿ ಪಾಕ್ ನಿಂದ ಜಮ್ಮು ಗಡಿಯಲ್ಲಿ ಮತ್ತೆ ಡ್ರೋನ್ ಗಳ ದಾಳಿ ನಡೆದಿದೆ.
ಜಮ್ಮುವಿನ ಸಾಂಬಾ ವಲಯದಲ್ಲಿ ಪಾಕ್ ಡ್ರೋನ್ ದಾಳಿ ನಡೆಸಿದ್ದು, ಅವು ಎಲ್ಲವನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಈ ಬೆಳವಣಿಗೆ ಬೆನ್ನಿಗೆ ಗಡಿ ಭಾಗದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಮೃತ್ ಸರಕ್ಕೆ ತೆರಳುತ್ತಿದ್ದ ವಿಮಾನ ದೆಹಲಿಗೆ ಮತ್ತೆ ವಾಪಾಸ್ ಆಗಿದೆ .
ಜಮ್ಮು-ಕಾಶ್ಮೀರವಷ್ಟೇ ಅಲ್ಲದೇ ಕಥುವಾ, ಅಮೃತ್ ಸರಗಳಲ್ಲಿಯೂ ಪಾಕ್ ಡ್ರೋನ್ ಗಳು ಭಾರತದ ಮೇಲೆ ದಾಳಿಗೆ ಯತ್ನಿಸಿದ್ದು, ಭಾರತೀಯ ಸೇನೆ ಅವುಗಳನ್ನು ಸಮರ್ಥವಾಗಿ ಎದುರಿಸಿದೆ.