ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣಲ್ಲಿ ಆಯೋಜಿಸಿದ ಮಿಸ್ ವರ್ಲ್ದ್ ಸ್ಪರ್ಧೆಗೆ ಈಗಾಗಲೇ 100ಕ್ಕೂ ಹೆಚ್ಚು ವಿವಿಧ ದೇಶಗಳಿಂದ ಸ್ಪರ್ಧಿಗಳು ಆಗಮಿಸಿದ್ದಾರೆ. ಮಿಸ್ ವರ್ಲ್ಡ್ ಫಿನಾಲೆ ಹೈದರಾಬಾದ್‌ನಲ್ಲಿ ಮೇ.31ಕ್ಕೆ ನಡೆಯಲಿದೆ.
ಇತ್ತ ತೆಲಂಗಾಣದಲ್ಲಿ ಈ ವರ್ಷ ಆಯೋಜನೆಗೊಂಡಿರುವ ಮಿಸ್ ವರ್ಲ್ಡ್ ಸ್ಪರ್ಧೆ ವಿವಾದದ ಕೇಂದ್ರ ಬಿಂದು ಆಗಿದೆ. ಇದಕ್ಕೆ ಕಾರಣ ವಿದೇಶಗಳಿಂದ ಭಾರತಕ್ಕೆ ಆಗಮಿಸಿದ ವಿಶ್ವ ಸುಂದರಿ ಸ್ಪರ್ಧಿಗಳ ಪಾದ ತೊಳೆಯಲಾಗಿದೆ. ಸೀರೆಯುಟ್ಟ ನಾರಿಯರು ಇವರ ಪಾದ ತೊಳೆದಿದ್ದು, ವಿವಾದ ಎಬ್ಬಿಸಿದೆ.
ಭಾರತಕ್ಕೆ ಬಂದು ಇಲ್ಲಿನ ಸಂಸ್ಕತಿ, ಪ್ರದೇಶಗಳ ವೀಕ್ಷಣೆ, ಮಾಹಿತಿ ತಿಳಿದುಕೊಳ್ಳುವುದು ಅತೀ ಮುಖ್ಯ. ಇಲ್ಲಿನ ಸಂಸ್ಕೃತಿ, ಪರಂಪರೆ ಬಗ್ಗೆ ತಿಳಿಸಿಕೊಡುವುದು ಅತೀ ಮುಖ್ಯ. ಆದರೆ ಸೀರೆಯುಟ್ಟ ನಾರಿಯರಿಗೆ ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆಯಲು ಸೂಚಿಸಿರುವುದು ಬ್ರಿಟಿಷ್ ವಸಾಹತುಶಾಹಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆಯಲು ಭಾರತೀಯ ನಾರಿಯರ ನೇಮಕ ಮಾಡಲಾಗಿದೆ. ಇದು ಸರಿಯಲ್ಲ. ಅವರ ಪಾದ ಪೂಜೆ ಯಾಕ ಮಾಡಬೇಕು? ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಕುರಿತು ಬಿಆರ್‌ಎಸ್ ಹಂಗಾಮಿ ಅಧ್ಯಕ್ಷ ಕೆಟಿ ರಾಮಾ ರಾವ್ ಕೂಡ ಆಕ್ರೋಶ ಹೊರಹಾಕಿದ್ದಾರೆ.
100ಕ್ಕೂ ಹೆಚ್ಚು ದೇಶಗಳಿಂದ ಆಗಮಿಸಿದ ಮಿಸ್ ವರ್ಲ್ಡ್ ಸ್ಪರ್ಧಿಗಳಿಗೆ ತೆಲಂಗಾಣದ ವಿವಿಧ ಪ್ರದೇಶಗಳು, ಸಂಸ್ಕೃತಿಗಳ ದರ್ಶನ ಮಾಡಿಸಲಾಗುತ್ತಿದೆ. ಈ ವೇಳೆ ದೇವಸ್ಥಾನ ಭೇಟಿಗೂ ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕೂ ಮುನ್ನ ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ಪೂಜೆ ಮಾಡಲಾಗಿದೆ. ಸೀರೆಯುಟ್ಟ ನಾರಿಯರಿಗೆ ಪಾದ ತೊಳೆಯಲು ಸೂಚಿಸಲಾಗಿದೆ. ಇಲ್ಲಿನ ಸಂಸ್ಕೃತಿಯಂತೆ ನಡೆಯಬೇಕು. ಬ್ರಿಟಿಷರ ಗುಲಾರಮಂತೆ ನಡೆದುಕೊಳ್ಳಬೇಡಿ ಅನ್ನೋ ಸಲಹೆ ಸೂಚನೆಗಳು ವ್ಯಕ್ತವಾಗಿದೆ.
ವಾರಂಗಲ್ ಪ್ರವಾಸದಲ್ಲಿ ವಿಶ್ವ ಸುಂದರಿ ಸ್ಪರ್ಧಿಗಳ ಪಾದಗಳನ್ನು ತೆಲಂಗಾಣ ಮಹಿಳೆಯರು ತೊಳೆದಿದ್ದು ವಿವಾದಕ್ಕೆ ಕಾರಣವಾಗಿದೆ. ಇದು ನಮ್ಮ ಸಂಪ್ರದಾಯ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ, ತೆಲಂಗಾಣ ಮಹಿಳೆಯರ ಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಿಆರ್‌ಎಸ್ ಆರೋಪಿಸಿದೆ.