ಟರ್ಕಿ ಮೇಲೆ ಮುನಿಸಿಕೊಂಡ ಪ್ರಕೃತಿ: ವಿವಿದೆಡೆ ಭೂಕಂಪನ, ಮನೆಯಿಂದ ಹೊರ ಓಡಿದ ಜನತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿ ವಿರುದ್ಧ ಭಾರತದಲ್ಲಿ ಬಾಯ್ಕಾಟ್ಅಭಿಯಾನ ಜೋರಾಗಿ ನಡೆಯುತ್ತಿದೆ. ಈ ಆಘಾತ ನಡುವೆ ಇದೀಗ ಟರ್ಕಿಗೆ ಪ್ರಾಕೃತಿಕ ವಿಕೋಪ ಆಘಾತ ಎದುರಾಗಿದೆ. ಟರ್ಕಿಯಲ್ಲಿ ಪ್ರಬಲ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 5.1 ರ ತೀವ್ರತೆ ದಾಖಲಾಗಿದೆ.

ಕುಲು ಪ್ರಾಂತ್ಯದ 14 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ಪ್ರಭಲ ಭೂಕಂಪದ ಅನುಭವವಾಗಿದೆ ಎಂದು ಟರ್ಕಿ ಸ್ಪಷ್ಟಪಡಿಸಿದೆ.

ಅಂಕರದಲ್ಲಿ ಭೂಮಿ ಕಂಪಿಸುತ್ತಿರುವ ಅನುಭವವಾಗುತ್ತಿದ್ದಂತೆ ಜನರು ಹೊರಗೆ ಓಡಿ ಬಂದಿದ್ದು, ಇನ್ನು ಕುಲು ಪ್ರಾಂತ್ಯದಲ್ಲಿನ ಇದರ ತೀವ್ರತೆ ಹೆಚ್ಚಿದೆ. ಕಟ್ಟಡಗಳು ಧರೆಗುರುಳಿದೆ ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಸಾವು ನೋವಿನ ವರದಿಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!