ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಭಾಲ್ ಜಾಮಾ ಮಸೀದಿ ಮತ್ತು ಹರಿಹರ ಮಂದಿರ ವಿಚಾರದಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸೋಮವಾರ ನೀಡಿದೆ.
ಪರಿಷ್ಕರಣಾ ಅರ್ಜಿಯನ್ನು ತಿರಸ್ಕರಿಸಿದ್ದು, ಇದು ಮಸೀದಿ ಸಮಿತಿಗೆ ದೊಡ್ಡ ಹೊಡೆತ ನೀಡಿದೆ. ಹೈಕೋರ್ಟ್‌ನ ತೀರ್ಪು ಸಮೀಕ್ಷೆಗೆ ದಾರಿ ಮಾಡಿಕೊಟ್ಟಿದೆ. ಇದರಿಂದಾಗಿ ಮತ್ತೊಮ್ಮೆ ಸಂಭಲ್ ಜಾಮಾ ಮಸೀದಿಯ ಸರ್ವೆ ಕಾರ್ಯ ನಡೆಯಲಿದೆ.
ಮಸೀದಿ ಸಮಿತಿಯು 2024 ರ ನವೆಂಬರ್ 19 ರಂದು ಸಿವಿಲ್ ನ್ಯಾಯಾಲಯ ನೀಡಿದ ಸರ್ವೆ ಆದೇಶವನ್ನು ಪ್ರಶ್ನಿಸಿತ್ತು.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಅಲಹಾಬಾದ್ ಹೈಕೋರ್ಟ್ ಪೀಠವು ಸಂಭಾಲ್‌ನಲ್ಲಿರುವ ಶಾಹಿ ಮಸೀದಿಯ ಸಮೀಕ್ಷೆ ಮಾಡಬಹುದಾಗಿದೆ ಎಂದು ತಿಳಿಸಿದೆ.
ಇದಕ್ಕೂ ಮೊದಲು, ಮಸೀದಿ ಸಮಿತಿಯು ಸರ್ವೆ ಆದೇಶಕ್ಕೆ ತಡೆ ನೀಡುವಂತೆ ಒತ್ತಾಯಿಸಿತ್ತು. ಮೇ 13 ರಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಪೂರ್ಣಗೊಂಡಿತ್ತು ಮತ್ತು ನ್ಯಾಯಾಲಯವು ನಿರ್ಧಾರವನ್ನು ಕಾಯ್ದಿರಿಸಿತ್ತು.
ಹಿಂದು ಕಡೆಯವರು ಇದು ಹರಿಹರ ದೇವಸ್ಥಾನ ಎಂದು ಹೇಳಿಕೊಂಡು ಸಂಭಾಲ್ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಮೇರೆಗೆ ಸಂಭಾಲ್ ಸಿವಿಲ್ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಇದರ ಮೇಲೆ, ಮಸೀದಿ ಸಮಿತಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಕರಣದ ನಿರ್ವಹಣೆಯನ್ನು ಪ್ರಶ್ನಿಸಿತು. 8 ಜನವರಿ 2025 ರಿಂದ, ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದ್ದು, ಸಿವಿಲ್ ನ್ಯಾಯಾಲಯದ ಸರ್ವೆ ಆದೇಶವನ್ನು ತಡೆಹಿಡಿಯಿತು.
ಇದಕ್ಕೂ ಮೊದಲು, ಏಪ್ರಿಲ್ 28 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಅಲಹಾಬಾದ್ ಹೈಕೋರ್ಟ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಸಮೀಕ್ಷೆಯ ಕುರಿತು ತನ್ನ ಉತ್ತರವನ್ನು ಸಲ್ಲಿಸಿ 48 ಗಂಟೆಗಳ ಒಳಗೆ ವರದಿ ಮಾಡುವಂತೆ ನಿರ್ದೇಶಿಸಿತ್ತು.