ಕಂಟೋನ್ಮೆಂಟ್ ಯೋಜನೆಗಾಗಿ 368 ಮರಗಳಿಗೆ ಕೊಡಲಿ ಪೆಟ್ಟು: ಕಾರ್ಯಕರ್ತರಿಂದ ಆಕೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಸಂತ ನಗರದ ಕಂಟೋನ್ಮೆಂಟ್ ಕಾಲೋನಿಯಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಸಮಾಲೋಚನೆಯಲ್ಲಿ, 368 ಹಳೆಯ ಮರಗಳನ್ನು ಕತ್ತರಿಸುವ ಉದ್ದೇಶಿತ ವಾಣಿಜ್ಯ ಯೋಜನೆಗೆ ನಿವಾಸಿಗಳು ಮತ್ತು ಪರಿಸರ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.

ಮರ ಕತ್ತರಿಸುವ ಪ್ರಸ್ತಾಪವನ್ನು ವಿರೋಧಿಸಿ 10,500 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ನಾವು ಇದರ ವಿರುದ್ಧ ದೃಢವಾಗಿ ನಿಲ್ಲುತ್ತೇವೆ ಎಂದು ಹೆರಿಟೇಜ್ ಬೇಕು ಸಂಸ್ಥಾಪಕಿ ಪ್ರಿಯಾ ಚೆಟ್ಟಿ ಹೇಳಿದರು.

ರೈಲ್ವೆ ಮತ್ತು ಅರಣ್ಯ ಇಲಾಖೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ನಿವಾಸಿಯೊಬ್ಬರು ಅರಣ್ಯ ಇಲಾಖೆಯು ನಮ್ಮ ಮರಗಳನ್ನು ರಕ್ಷಿಸಬೇಕು. ಇಲ್ಲದಿದ್ದರೆ, ನಾವು ಅದನ್ನು ನಮ್ಮ ಕೈಯಲ್ಲಿ ತೆಗೆದುಕೊಂಡು ಈ ಪರಂಪರೆಯನ್ನು ಉಳಿಸಿಕೊಳ್ಳಲು ಏನು ಅಗತ್ಯವಿದೆಯೋ ಅದೆಲ್ಲಾವನ್ನು ಮಾಡುತ್ತೇವೆ ಎಂದು ಹೇಳಿದರು.

ಸುಧಾರಿತ ಸಂಚಾರ ನಿರ್ವಹಣೆ, ಸಾರ್ವಜನಿಕ ಅನುಕೂಲತೆ ಮತ್ತು ಹೆಚ್ಚಿದ ಆದಾಯದಂತಹ ಅಂಶಗಳನ್ನು ಉಲ್ಲೇಖಿಸಿ, ಪ್ರಸ್ತಾವಿತ ಯೋಜನೆಯ ಪ್ರಯೋಜನಗಳನ್ನು ರೈಲ್ವೆ ಅಧಿಕಾರಿಗಳು ವಿವರಿಸಿದರು. ಅವರ ವಾದಗಳನ್ನು ತಕ್ಷಣವೇ ತಿರಸ್ಕರಿಸಲಾಯಿತು. ಅನೇಕರು ಪ್ರಸ್ತಾವನೆಯನ್ನು ವೀಕ್ಷಿಸಲು ನಿರಾಕರಿಸಿದರು. ಈ ಯೋಜನೆಯ ಅಡಿಪಾಯ ಯಾವಾಗಲೂ ಸಾರ್ವಜನಿಕ ಕಾಳಜಿ ಮತ್ತು ಅಭಿಪ್ರಾಯಗಳನ್ನು ಆಧರಿಸಿರುತ್ತದೆ ಎಂದು ರೈಲ್ವೆ ಅಧಿಕಾರಿಗಳು ಒತ್ತಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!