ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಲಿಯಾ ಭಟ್ ಅವರು 2022ರ ನವೆಂಬರ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈಗ ಮಗುವಿಗೆ ಎರಡೂವರೆ ವರ್ಷ. ಹೀಗಿರುವಾಗಲೇ ಆಲಿಯಾ ಭಟ್ ಅವರು ಮತ್ತೊಂದು ಮಗು ಹೊಂದಲು ರೆಡಿ ಆಗುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಇದಕ್ಕೆ ಸಾಕ್ಷಿ. ಆಲಿಯಾ ಭಟ್ ಅವರು ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿ ಆಗಿದ್ದಾರೆ. ಅವರು ಪೋಸ್ ಕೊಡುವಾಗ ಹೊಟ್ಟೆ ಸ್ವಲ್ಪ ಮುಂದೆ ಬಂದಂತೆ ಕಾಣಿಸಿದೆ. ಇದರಿಂದ ಅವರು ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಆಲಿಯಾ ಭಟ್ ಅವರು ಮದುವೆ ಆದ ಕೇವಲ ಏಳು ತಿಂಗಳಿಗೆ ಮಗುವಿಗೆ ಜನ್ಮನೀಡಿದರು. ಆ ಬಳಿಕ ಆಲಿಯಾ ಭಟ್ ಅವರು ವಿವಿಧ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡರು. ಈಗ ಅವರ ಕೈಯಲ್ಲಿ ಕೆಲ ಪ್ರಮುಖ ಸಿನಿಮಾಗಳು ಇವೆ. ಹೀಗಿರುವಾಗಲೇ ಅವರಿಗೆ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.