ಹೊಸದಿಗಂತ ವರದಿ, ಪಾಂಡವಪುರ :
ವಿದ್ಯುತ್ ತಂತಿ ತಗುಲಿ ಮಗು ಮೃತಪಟ್ಟು, ತಾಯಿ ಗಾಯಗೊಂಡಿರುವ ಘಟನೆ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬನ್ನಂಗಾಡಿ ಗ್ರಾಮ ಸುಧೀರ್ ಪುತ್ರ ಸಂಜು(5) ಮೃತ ಬಾಲಕ. ಶಿಲ್ಪ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಲ್ಪ ಹಾಗೂ ಮೃತ ಬಾಲಕ ಸಂಜು ಅವರ ಅಜ್ಜಿ ಮನೆ ಚಿಕ್ಕಮರಳಿ ಗ್ರಾಮದಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗೆ ಸ್ನಾನದ ಮನೆಗೆ ಮೃತ ಬಾಲಕ ಸಂಜು ಹೋಗಿ ಬಾಗಿಲು ಹಾಕಿದ್ದಾನೆ ಆ ಮೇಳೆ ವಿದ್ಯುತ್ ಗ್ರೌಂಡಿಂಗ್ ಆಗಿ ಬಾಲಕ ಸಾವನ್ನಾಪ್ಪಿದ್ದಾನೆ. ಮಗನನ್ನು ಕಾಪಾಡಲು ಹೋಗಿ ತಾಯಿ ಶಿಲ್ಪ ಅವರು ಸಹ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.