ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆರ್‌ಸಿಬಿ ವಿಜಯೋತ್ಸವ ಸಂದರ್ಭ ನಡೆದ ಕಾಲ್ತುಳಿತ ಘಟನೆ ಸಿಎಂ ಸಿದ್ದರಾಮಯ್ಯ ಮನಸ್ಸಿಗೆ ಬಹಳಷ್ಟು ನೋವು ನೀಡಿದೆ ಎಂದು ಸಚಿವ ಎಂ.ಸಿ. ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಘಟನೆ ನಮಗೆಲ್ಲರಿಗೂ ನೋವು ತಂದಿದೆ. ಸರ್ಕಾರ ತನಿಖೆ ಮಾಡುತ್ತಿದೆ. ಸತ್ಯಾಸತ್ಯತೆ ಹೊರಬಂದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಮೃತಪಟ್ಟವರ ಜೀವ ಮರಳಿ ತಂದುಕೊಡಲು ಸಾಧ್ಯ ಇಲ್ಲ, ಆ ಕುಟುಂಬ ಸದಸ್ಯರುಗಳ ನೋವು ಮರೆಸುವುದೂ ಸಾಧ್ಯ ಇಲ್ಲ. ನಾನೂ ಕ್ರಿಕೆಟ್ ಪ್ರೇಮಿ, ನನ್ನ ಕ್ಷೇತ್ರದಲ್ಲಿ ಇಬ್ಬರು ಹುಡುಗರ ಸಾವಾಗಿದೆ. ನನಗೂ ನೋವಾಗಿದೆ. ಐಪಿಎಲ್ ಆಪರೇಷನ್ ಸಿಂಧೂರದಿಂದ ಕೆಲ ಸಮಯ ವಿಳಂಬ ಆಯಿತು. ಸಂಭ್ರಮಾಚರಣೆ ತೀರ್ಮಾನ ಮಾಡಿದ್ದು ಆರ್‌ಸಿಬಿ ಮ್ಯಾನೇಜ್‌ಮೆಂಟ್, ನಾವಲ್ಲ ಎಂದು ಅವರು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ