“ಪಾರ್ಲೆ-ಜಿ” ಈ ಹೆಸರೇ ಸಾಕು… ಹಲವರಿಗೆ ತಮ್ಮ ಬಾಲ್ಯದ ನೆನಪು ಮರುಕಳಿಸಿಬಿಡುತ್ತದೆ. ಭಾರತದಲ್ಲಿ ಹಳೆಯ ಬಿಸ್ಕೆಟ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಪಾರ್ಲೆ-ಜಿ ಮತ್ತೆ ಸುದ್ದಿಗೆ ಗ್ರಾಸವಾಗಿದೆ. ಆದರೆ ಈ ಬಾರಿ ಕಾರಣ ಬಿಸ್ಕೆಟ್ ರುಚಿ ಅಥವಾ ಮಾರಾಟವಲ್ಲ, ಬದಲಿಗೆ ಅದರ ಪ್ಯಾಕ್ ಮೇಲೆ ಇದ್ದ ಅದೆಷ್ಟೋ ವರ್ಷಗಳಿಂದ ಎಲ್ಲರಿಗೂ ಪರಿಚಿತವಾಗಿರುವ ಮಗುವಿನ ಚಿತ್ರ.
ಇತ್ತೀಚೆಗಷ್ಟೇ ಮಹಿಳೆಯೊಬ್ಬಳು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಪಾರ್ಲೆ-ಜಿ ಲೋಗೋದಲ್ಲಿರುವ ಮಗು ತನ್ನ ಮಗಳದು ಎಂದು ಧಿಟ್ಟಿಯಾಗಿ ಹೇಳಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅವರ ಪ್ರಕಾರ, ಮಗು ಆರು ತಿಂಗಳಿದ್ದಾಗ ತೆಗೆದ ಫೋಟೋವನ್ನೇ ಪಾರ್ಲೆ-ಜಿ ಬಳಸಿದೆ ಎಂಬುದು ಅವರ ವಾದ.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪತ್ರಕರ್ತನು – ಈ ಪ್ಯಾಕ್ ಮೇಲಿರುವ ಮಗುವಿನ ಚಿತ್ರ ಕನಿಷ್ಠ 50–60 ವರ್ಷ ಹಳೆಯದು, ನಿಮ್ಮ ಮಗಳಿಗೆ ಈಗ 11 ವರ್ಷ – ಹೀಗಾಗಿ ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರೂ, ಮಹಿಳೆಗೆ ಇದಕ್ಕೆ ತರ್ಕಸಮ್ಮತ ಉಟ್ಟ ನೀಡಿಲ್ಲ.
ಹಾಗಿದ್ದರೂ, ಲೋಗೋದ ಮಗು ಹಾಗೂ ಆ ಬಾಲಕಿಯ ಮುಖದ ನಡುವೆ ಇರುವ ಹೋಲಿಕೆ ವೈರಲ್ ಆಗಿದ್ದು ನಿಜ. ಕೆಲವರು ಈ ವಾದವನ್ನು ಮಾರ್ಕೆಟಿಂಗ್ ಗಿಮಿಕ್ ಎಂದು ತಮ್ಮ ಅಭಿಪ್ರಾಯವನ್ನು ನೀಡುತ್ತಿದ್ದಾರೆ. ಪಾರ್ಲೆ ಕಂಪೆನಿಯಿಂದ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಈ ಸುದ್ದಿ ಮೂಲತಃ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಅಭಿಪ್ರಾಯಗಳ ಆಧಾರದ ಮೇಲೆ ತಯಾರಿಸಲಾಗಿದೆ. ಲೋಗೋದ ಮಗುವಿನ ಬಗ್ಗೆ ಕಂಪೆನಿಯು ಹಿಂದೆ ಹೇಳಿರುವಂತೆ, ಇದು ಕಲ್ಪಿತ ಚಿತ್ರವಾಗಿರಬಹುದು ಎಂಬ ಶಂಕೆಗಳೂ ಇವೆ ಹೊರತು ನಿಜ ವ್ಯಕ್ತಿಯ ಚಿತ್ರ ಎಂಬುದು ಅಧಿಕೃತವಾಗಿ ಸಾಬೀತಾಗಿಲ್ಲ.
View this post on Instagram