ಮುರ್ಷಿದಾಬಾದ್‌: ಸಹೋದ್ಯೋಗಿಯಿಂದಲೇ ಗಡಿ ಭದ್ರತಾ ಪಡೆ ಯೋಧನ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಶನಿವಾರ ರಾತ್ರಿ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧರೊಬ್ಬರನ್ನು ಅವರ ಸಹೋದ್ಯೋಗಿಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬಿಎಸ್‌ಎಫ್‌ನ 119 ನೇ ಬೆಟಾಲಿಯನ್‌ನಲ್ಲಿ ನಿಯೋಜಿತರಾಗಿರುವ ರಾಜಸ್ಥಾನದ ಆರೋಪಿ ಎಸ್‌ಕೆ ಮಿಶ್ರಾ, ತಮ್ಮ ಐಎನ್‌ಎಸ್‌ಎಎಸ್ ರೈಫಲ್‌ನಿಂದ 13 ಸುತ್ತು ಗುಂಡು ಹಾರಿಸಿದ್ದು, ಸಹೋದ್ಯೋಗಿ ರತನ್ ಲಾಲ್ ಸಿಂಗ್ (38) ಗೆ ತಗುಲಿ ಮಾರಣಾಂತಿಕ ಗಾಯಗಳನ್ನುಂಟು ಮಾಡಿದ್ದವು ಎನ್ನಲಾಗಿದೆ.

ರತನ್ ಲಾಲ್ ಸಿಂಗ್ ಅವರನ್ನು ಮೊದಲು ಅನುಪ್ನಗರ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಅವರ ಸ್ಥಿತಿ ಗಂಭೀರವಾದ ಕಾರಣ ಜಂಗಿಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಕರೆತರುವಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಆರೋಪಿ ಎಸ್.ಕೆ. ಮಿಶ್ರಾ ಸ್ಥಳದಿಂದ ಪರಾರಿಯಾಗಿದ್ದ. ಆದರೆ, ಪೊಲೀಸರು ಆ ರಾತ್ರಿ ಅವರನ್ನು ಪತ್ತೆಹಚ್ಚಿ ಬಂದೂಕಿನ ಸಮೇತ ಬಂಧಿಸಿದ್ದಾರೆ. ಔಪಚಾರಿಕ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಯನ್ನು ಇಂದು ಜಂಗಿಪುರ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ.

ಬಿಎಸ್‌ಎಫ್ ಮೂಲಗಳ ಪ್ರಕಾರ, ಕೋಲ್ಕತ್ತಾ ಹೈಕೋರ್ಟ್ ಶಾಂತಿ ಕಾಪಾಡಲು ಮತ್ತು ನಾಗರಿಕರನ್ನು ರಕ್ಷಿಸಲು ನೀಡಿದ ಆದೇಶದ ಮೇರೆಗೆ ಹಿಂಸಾಚಾರ ಪೀಡಿತ ಸ್ಥಳದಲ್ಲಿ ಇಬ್ಬರೂ ಯೋಧರನ್ನು ನಿಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!