ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿಯಾಗಿದ್ದಾರೆ.
ಮೋದಿ ಅವರನ್ನು ಭೇಟಿ ಆಗುತ್ತಿದ್ದಂತೆ ಮೆಲೋನಿ ಅವರು, ನೀವು ಅತ್ಯುತ್ತಮರು. ನಾನು ನಿಮ್ಮಂತೆ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಮೆಲೋನಿ ಮೋದಿ ಅವರಿಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ʼಮೆಲೋಡಿ ಮೊಮೆಂಟ್ʼ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ನರೇಂದ್ರ ಮೋದಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಜಿ20 ಸಮ್ಮೇಳನಕ್ಕೆ ಮೆಲೋನಿ ಬಂದಾಗ #Melodi ಹ್ಯಾಶ್ ಟ್ಯಾಗ್ ಫೇಮಸ್ ಆಗಿತ್ತು. ಮೆಲೋನಿ ಮತ್ತು ಮೋದಿ ಹೆಸರನ್ನು ಸೇರಿಸಿ ಅಭಿಮಾನಿಗಳು Melodi ಟ್ಯಾಗ್ ಬಳಸಿ ಪೋಸ್ಟ್ ಮಾಡುತ್ತಿದ್ದಾರೆ.
🚨 G7 Summit | Giorgia Meloni to PM Modi: “You are the BEST, I am trying to be as you.” 🥰 pic.twitter.com/INHY2SuAQj
— Megh Updates 🚨™ (@MeghUpdates) June 18, 2025