ವಿಮಾನ ದುರಂತ ಸ್ಥಳದಲ್ಲಿ 70 ತೊಲ ಬಂಗಾರ, ಹಣ ಸಂಗ್ರಹಿಸಿ ಪೊಲೀಸರಿಗೆ ಒಪ್ಪಿಸಿದ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಪಘಾತ ಅಥವಾ ದುರಂತ ನಡೆದ ಸ್ಥಳದಲ್ಲಿ ಏನಾದರೂ ಬೆಲೆಬಾಳುವ ವಸ್ತುಗಳು ಸಿಕ್ಕರೆ ಅದನ್ನು ತೆಗದುಕೊಂಡುಹೋಗುವವರೇ ಹೆಚ್ಚು. ಆದರೆ ಇಲ್ಲೊಬ್ಬರು ಕಷ್ಟಪಟ್ಟು ದುರಂತ ಜಾಗದಲ್ಲಿ ಸಿಕ್ಕ ಹಣ ಹಾಗೂ ಬಂಗಾರವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೌದು, ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದಾಗ ತಕ್ಷಣಕ್ಕೆ ಸ್ಪಂದಿಸಿದ ಅನೇಕರಲ್ಲಿ ಒಬ್ಬರು ರಾಜೇಶ್​ ಪಟೇಲ್​. ಮೃತದೇಹಗಳನ್ನು ಮತ್ತು ಗಾಯಾಳುಗಳನ್ನು ಆಂಬ್ಯುಲೆನ್ಸ್​ ಮೂಲಕ ಸಾಗಿಸಲು ಇವರು ಸಹಾಯ ಮಾಡಿದ್ದರು. ಇದಾದ ಬಳಿಕ ಘಟನಾ ಸ್ಥಳಕ್ಕೆ ಬಂದಿದ್ದ ಅವರು, ಸಂತ್ರಸ್ತರ ಪ್ರೀತಪಾತ್ರರ ವಸ್ತುಗಳಿಗಾಗಿ ಹುಡುಕಾಟ ನಡೆಸಿ, ಅವರ ಕುಟುಂಬಕ್ಕೆ ಮರಳಿಸುವ ನಿರ್ಧಾರ ಮಾಡಿದ್ದರು.

ಅದರಂತೆ, 57 ವರ್ಷದ ಪಟೇಲ್ ವಿಮಾನ ಪತನಗೊಂಡ ಸ್ಥಳದಲ್ಲಿ​ ಸುಮಾರು 70 ತೊಲ ಬಂಗಾರದ ಆಭರಣ, 50 ಸಾವಿರ ರೂ ಹಣ ಹಾಗೂ ಕೆಲವು ಅಮೆರಿಕನ್​ ಡಾಲರ್‌ಗಳನ್ನು ಸಂಗ್ರಹಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!