ಹೊಸದಿಗಂತ ವರದಿ ಚಿಕ್ಕಮಗಳೂರು:
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರ್‌ನ್ನು ೨೦ ಅಡಿ ದೂರಕ್ಕೆ ಎಳೆದೊಯ್ದ ಘಟನೆ ತಾಲೂಕಿನ ವಸ್ತಾರೆ ಬಳಿ ನಡೆದಿದೆ.
ಡಿಕ್ಕಿಯ ರಭಸಕ್ಕೆ ನೆಲದಲ್ಲಿ ಹೂತಿದ್ದ ವಿದ್ಯುತ್ ಕಂಬ ಸಂಪೂರ್ಣ ಕಿತ್ತುಬಂದು ಕಾರಿನ ಜೊತೆಗೆ ಎಳೆಯಲ್ಪಟ್ಟಿದ್ದು. ಗ್ರೌಂಡಿಂಗ್ ಕೇಬಲ್ ಕೂಡ ತುಂಡಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಕಾರಿನ ಏರ್ ಬ್ಯಾಗ್ ಓಪನ್ ಆಗಿರುವ ಪರಿಣಾಮ ಚಾಲಕನ ಜೀವ ಉಳಿದಿದೆ.
ಕಂಬ ಮುರಿದು ಬೀಳುತ್ತಿದ್ದಂತೆಯೇ ವಿದ್ಯುತ್ ಸಂಪರ್ಕವೂ ಕಟ್ ಆಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಅಜಾಗರೂಕ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಸ್ಥಳೀಯರು ಅಪಘಾತದ ರಭಸವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.