ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಲಾದರೂ ಇರಾನ್ ಶಾಂತಿ ಸ್ಥಾಪಿಸಲಿ, ಇಲ್ಲವಾದರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ನೀಡಿದ್ದಾರೆ.
ಇರಾನ್ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿ ಬಳಿಕ ಶ್ವೇತಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಇರಾನ್ ಮೇಲಿನ ದಾಳಿ ಯಶಸ್ವಿಯಾಗಿದೆ. ಈಗಲಾದರೂ ಇರಾನ್. ಇಸ್ರೇಲ್ ಜೊತೆಗಿನ ಯುದ್ಧಕ್ಕೆ ವಿರಾಮ ಘೋಷಿಸಿ, ಶಾಂತಿ ಸ್ಥಾಪಿಸಲಿ. ಇಲ್ಲವಾದರೆ ಭವಿಷ್ಯದಲ್ಲಿ ಭಾರೀ ಪ್ರಮಾಣದ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.