ಮಳೆಗಾಲ ಆರಂಭವಾದಾಗಲೇ ಮೀನು ಮಾರುಕಟ್ಟೆ ಚುರುಕಾಗುತ್ತದೆ. ಈ ಸಮಯದಲ್ಲಿ ಜನರು ಚಪ್ಪರಿಸಿ ತಿನ್ನುವ ತಾಜಾ ಮೀನುಗಳೊಂದಿಗೆ, ಆರೋಗ್ಯಕ್ಕೆ ನಿಜವಾದ ಲಾಭ ನೀಡುವ ಒಣ ಮೀನು ಕಡೆಗೆ ಹೆಚ್ಚಿನ ಕಣ್ಣಾಡಿಸುತ್ತಿದ್ದಾರೆ. ಭಾರತದಲ್ಲಿ, ವಿಶೇಷವಾಗಿ ಕರಾವಳಿ ರಾಜ್ಯಗಳಲ್ಲಿ ಒಣಗಿದ ಮೀನು ಶತಮಾನಗಳಿಂದ ಆಹಾರದ ಮುಖ್ಯ ಭಾಗವಾಗಿದ್ದು, ಇಂದಿಗೂ ಎಲ್ಲಾ ವರ್ಗದ ಜನರಲ್ಲಿ ಜನಪ್ರಿಯವಾಗಿದೆ.
ತೇವಾಂಶವನ್ನು ತೆಗೆದು ಸಂರಕ್ಷಿಸಲಾದ ಮೀನುಗಳಲ್ಲಿ ಅತ್ಯಧಿಕ ಪ್ರಮಾಣದ ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸೋಡಿಯಂ ಇರುತ್ತದೆ. 100 ಗ್ರಾಂ ಒಣ ಮೀನಿನಲ್ಲಿ ಸುಮಾರು 50-60 ಗ್ರಾಂ ಪ್ರೋಟೀನ್ ಅಂಶವಿದೆ ಎಂಬುದು ಗಮನಾರ್ಹ. ಇದು ದೇಹದ ಸ್ನಾಯುಗಳ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಹಾಗೆಯೇ, ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಒಮೆಗಾ-3 ಕೊಬ್ಬಿನಾಮ್ಲಗಳೂ ಇದರಲ್ಲಿ ಹೆಚ್ಚಿರುತ್ತವೆ.
ಸ್ನಾಯುಗಳಿಗೆ ಬಲ ನೀಡುತ್ತದೆ
ಒಣ ಮೀನು ಪ್ರೋಟೀನ್ನಲ್ಲಿ ಸಮೃದ್ಧವಾಗಿದೆ. ಇದು ದೇಹದ ಸ್ನಾಯುಗಳ ಬೆಳವಣಿಗೆಗೆ ಸಹಾಯಮಾಡಿ, ಶಕ್ತಿಯನ್ನು ಹೆಚ್ಚಿಸುತ್ತದೆ.
ಹೃದಯ ಆರೋಗ್ಯ ಸುಧಾರಣೆ
ಒಮೆಗಾ-3 ಕೊಬ್ಬಿನಾಮ್ಲಗಳಿರುವ ಕಾರಣ, ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ
ಕ್ಯಾಲ್ಸಿಯಂ ಮತ್ತು ರಂಜಕಗಳಿರುವ ಕಾರಣ, ಮೂಳೆಗಳ ಬಲವರ್ಧನೆಗೆ ಮತ್ತು ದುರ್ಬಲತೆ ನಿವಾರಣೆಗೆ ಉಪಯುಕ್ತ.
ರಕ್ತಹೀನತೆ ನಿವಾರಣೆ
ಒಣಗಿದ ಮೀನಿನಲ್ಲಿ ಕಬ್ಬಿಣದ ಅಂಶವಿದ್ದು . ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ರಕ್ತದ ಕೊರತೆಯನ್ನು ಕಡಿಮೆಮಾಡುತ್ತದೆ.
ಮೆದುಳಿನ ಶಕ್ತಿವರ್ಧನೆ
ಒಮೆಗಾ-3 ಕೊಬ್ಬಿನಾಮ್ಲಗಳಿಂದ ಮೆದುಳಿನ ಚುರುಕು, ಒತ್ತಡ ನಿರ್ವಹಣೆ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ.
ಚರ್ಮದ ಆರೋಗ್ಯಕ್ಕಾಗಿ ಉತ್ತಮ
ಪ್ರೋಟೀನ್ ಹಾಗೂ ಒಮೆಗಾ-3 ಅಂಶಗಳು ಚರ್ಮದ ತಾಜಾತನ, ಹೊಳಪು ಮತ್ತು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತವೆ.
ಸಲಹೆ: ಸೇವಿಸುವ ಮೊದಲು 1 ಗಂಟೆ ನೀರಿನಲ್ಲಿ ನೆನೆಸಿ, ಚೆನ್ನಾಗಿ ತೊಳೆಯುವುದು ಆರೋಗ್ಯಕರ. ಈರುಳ್ಳಿ, ಟೊಮೆಟೊ, ಶುಂಠಿ-ಬೆಳ್ಳುಳ್ಳಿ ಜತೆಗೆ ಬೇಯಿಸಿ ಸೇವಿಸುವುದು ಉತ್ತಮ.