ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ MAGA ದಂತೆ ಇರಾನ್ ಅಭಿವೃದ್ಧಿಗೆ MIGA ಘೋಷಿಸಿದ್ದಾರೆ.
ಪ್ರಸ್ತುತ ಇರಾನಿನ ಆಡಳಿತವು ಇರಾನ್ ಅನ್ನು ಮತ್ತೆ ಶ್ರೇಷ್ಠವಾಗಿಸಲು ಸಾಧ್ಯವಾಗದಿದ್ದರೆ ಆಡಳಿತ ಬದಲಾವಣೆ ಯಾಕೆ ಮಾಡಬಾರದು ಎಂದು ಪ್ರಶ್ನಿಸಿ MIGA ಎಂದು ಟ್ರಂಪ್ ಬರೆದಿದ್ದಾರೆ.
Make America Great Again ಅನ್ನು ಸಂಕ್ಷಿಪ್ತವಾಗಿ MAGA ಎಂದು ಕರೆಯಲಾಗುತ್ತದೆ. ಅಮೆರಿಕದ ಕಂಪನಿಗಳು ಅಮೆರಿಕದಲ್ಲೇ ಬಂಡವಾಳ ಹೂಡಬೇಕು. ಅಮೆರಿಕದ ಜನರಿಗೆ ಉದ್ಯೋಗ ನೀಡಬೇಕು. ಮತ್ತೊಮ್ಮೆ ಅಮೆರಿಕವನ್ನು ಶ್ರೇಷ್ಠ ದೇಶವನ್ನಾಗಿಸಬೇಕು ಎನ್ನುವುದು ಈ MAGA ಅಭಿಯಾನದ ಅರ್ಥ. ಟ್ರಂಪ್ ಅವರು ಇರಾನ್ ಮತ್ತೊಮ್ಮೆ ಶ್ರೇಷ್ಠ ದೇಶವಾಗಬೇಕು. ಇದಕ್ಕೆ MAKE IRAN GREAT AGAIN (MIGA) ಆರಂಭವಾಗಬೇಕು ಎಂದು ಸಲಹೆ ನೀಡಿದ್ದಾರೆ.