ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ತಿರುಪತಿ ದೇವಸ್ಥಾನಂನಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಈಗ ಬರೋಬ್ಬರಿ 10 ಲಕ್ಷ ಕೆ.ಜಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ.
ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂದು ಟಿಟಿಡಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳ ತಿರುಪತಿಗೆ ಅಗತ್ಯ ತುಪ್ಪವನ್ನು ಕಳುಹಿಸಿಕೊಟ್ಟಿದೆ.
ಸೋಮವಾರ ಒಂದೇ ದಿನ ತಿರುಪತಿಗೆ 2.50 ಲಕ್ಷ ಕೆಜಿ ತುಪ್ಪವನ್ನು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಬಿಗಿ ಭದ್ರತೆಯೊಂದಿಗೆ ಕಳುಹಿಸಿಕೊಟ್ಟಿದೆ.
ಮೊದಲ ಭಾಗವಾಗಿ ಮಂಡ್ಯದ ಹಾಲು ಒಕ್ಕೂಟದಿಂದ ತುಪ್ಪ ಪೊರೈಕೆ ಮಾಡಿದ್ದು ಇನ್ನುಳಿದ ತುಪ್ಪವನ್ನು ಇತರೇ ಮಹಾ ಮಂಡಳಿಯಿಂದ ಕೆಎಂಎಫ್ ಕಳುಹಿಸಿ ಕೊಡಲಿದೆ. ತಿರುಪತಿ ಅಗತ್ಯಕ್ಕೆ ತಕ್ಕಂತೆ ನಂದಿನಿ ತುಪ್ಪ ಪೂರೈಕೆ ಮಾಡುವುದಾಗಿ ಕೆಎಂಎಫ್ ತಿಳಿಸಿದೆ.