ಬಾಲಿವುಡ್‌ಗೆ ಗುಡ್‌ಬೈ ಹೇಳಿದ ಗೀತಾ ಕಪೂರ್ ! ಅವರ ನಿರ್ಧಾರದಲ್ಲಿ ಅರ್ಥವಿದೆ ಎಂದ ಅಭಿಮಾನಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಸಿದ್ಧ ನೃತ್ಯ ನಿರ್ದೇಶಕಿ ಮತ್ತು ಟಿವಿ ರಿಯಾಲಿಟಿ ಶೋಗಳ ತೀರ್ಪುಗಾರ್ತಿ “ಗೀತಾ ಮಾ” ಎಂದೇ ಜನಪ್ರಿಯರಾದ ಗೀತಾ ಕಪೂರ್ ಅವರು ಈಗ ಬಾಲಿವುಡ್‌ ನಲ್ಲಿ ತಮ್ಮ ನೃತ್ಯ ನಿರ್ದೇಶಕಿಯ ಜರ್ನಿಯನ್ನು ಕೊನೆಗೊಳಿಸುವುದಾಗಿ ದೃಢ ನಿರ್ಧಾರ ಮಾಡಿದ್ದಾರೆ. ತಮ್ಮ ನಿರ್ಧಾರವನ್ನು ಒಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ ಅವರು, ತಮ್ಮ ಅಭಿಮಾನಿಗಳಿಗೆ ಆಶ್ಚರ್ಯ ಉಂಟುಮಾಡಿದರೂ, ಈ ತೀರ್ಮಾನವು ಹೊಸ ಪ್ರತಿಭೆಗಳಿಗೆ ಮಾರ್ಗ ನೀಡುವುದಾಗಿದೆ ಎಂದಿದ್ದಾರೆ.

ಗೀತಾ ಕಪೂರ್ ತಮ್ಮ ವೃತ್ತಿಜೀವನವನ್ನು ಕೇವಲ 17ನೇ ವಯಸ್ಸಿನಲ್ಲಿ ಪ್ರಾರಂಭಿಸಿ, ಫರಾ ಖಾನ್ ಅವರ ಸಹಾಯಕರಾಗಿ ‘ಕುಚ್ ಕುಚ್ ಹೋತಾ ಹೈ’, ‘ದಿಲ್ ತೋ ಪಾಗಲ್ ಹೈ’, ‘ಕಭಿ ಖುಷಿ ಕಭಿ ಗಮ್’ ಮುಂತಾದ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. “ಈ ಉದ್ಯಮ ನನಗೆ ಎಲ್ಲವನ್ನೂ ಕೊಟ್ಟಿದೆ – ಖ್ಯಾತಿ, ಹಣ ಮತ್ತು ಪ್ರೀತಿಯನ್ನು. ಈಗ ಹೊಸ ಪ್ರತಿಭೆಗಳು ಬೆಳಗಬೇಕಾದ ಸಮಯ. ಉದ್ಯಮದಲ್ಲಿ ಪ್ರಸ್ತುತ ಕೆಲಸದ ಕೊರತೆಯಿದೆ, ಆದ್ದರಿಂದ ಇತರರಿಗೆ ಅವಕಾಶ ಸಿಗುವಂತೆ ಹಿಂದೆ ಸರಿಯುತ್ತಿರುವುದಾಗಿ” ಸ್ಪಷ್ಟವಾಗಿ ತಿಳಿಸಿದ್ದಾರೆ.ಇವರ ಈ ನಿರ್ಧಾರ ಅಭಿಮಾನಿಗಳಲ್ಲಿ ಮೆಚ್ಚುಗೆ ಮೂಡಿದೆ.

ಆದರೆ ಅವರು ಒಂದು ಷರತ್ತು ಕೂಡ ಇಟ್ಟಿದ್ದಾರೆ: “ನಾನು ಕಳೆದುಕೊಳ್ಳಬಾರದು ಎಂದು ಭಾಸವಾಗುವಂತಹ ಅವಕಾಶ ಬಂದರೆ ಮಾತ್ರ, ನಾನು ಪುನಃ ಕೆಲಸ ಮಾಡುತ್ತೇನೆ,” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!