ಪ್ರತಿದಿನವೂ ಉಪ್ಪಿಟ್ಟು, ದೋಸೆ, ಇಡ್ಲಿ, ಅವಲಕ್ಕಿ… ತಿಂದು ತಿಂದು ಬೋರಾಗಿರೋರಿಗೆ ಇನ್ನು ಬೇರೆ ಏನಾದರೂ ಹೊಸದಾಗಿ ತಿನ್ನ್ಬೇಕು! ಅನ್ನೋ ಅಸೆ. ಆದರೆ ಹೊಸದಾಗಿ ಏನಾದರೂ ತಯಾರಿಸಬೇಕೆಂದರೆ ಅದಕ್ಕೆ ತುಂಬಾ ಟೈಮ್ ಬೇಕು. ಆದರೆ ಇವತ್ತು ನಾವು ಮಾಡುವ ಈ ದೋಸೆಗೆ ತುಂಬಾ ಟೈಮ್ ಬೇಡ.
ಬೇಕಾಗುವ ಪದಾರ್ಥಗಳು:
ಸೌತೆಕಾಯಿ
ಉಪ್ಪು
ಕೆಂಪು ಖಾರದ ಪುಡಿ
ಗೋಧಿ ಹಿಟ್ಟು (ಮನೆಯಲ್ಲಿರುವ ಯಾವ ಹಿಟ್ಟನ್ನು ಬಳಸಬಹುದು)
ಅಕ್ಕಿ ಹಿಟ್ಟು
ಕಡಲೆ ಹಿಟ್ಟು
ಮೊಸರು
ಮಾಡುವ ವಿಧಾನ:
ಮೊದಲಿಗೆ ಸೌತೆಕಾಯಿಯನ್ನು ತುರಿದುಕೊಳ್ಳಿ. ಬಳಿಕ ಒಂದು ದೊಡ್ಡ ಪಾತ್ರೆಯಲ್ಲಿ ಸೌತೆಕಾಯಿ ತುರಿ, ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಉಪ್ಪು, ಖಾರದಪುಡಿ, ಮೊಸರು ಮತ್ತು ತೆಂಗಿನ ತುರಿ ಹಾಕಿ ನೀರು ಸೇರಿಸಿ ದೋಸೆಗೆ ಬೇಕಾದ ಹದಕ್ಕೆ ಹಿಟ್ಟನ್ನು ಕಲಸಿ.
ತವಾ ಕಾದ ನಂತರ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ, ತಕ್ಷಣವೇ ಈ ಹಿಟ್ಟನ್ನು ತೆಳುವಾಗಿ ಹರಡಿ. ಎರಡು ಬದಿಯಿಂದ ಚೆನ್ನಾಗಿ ಬೇಯಿಸಿದರೆ ಸೌತೆಕಾಯಿ ದೋಸೆ ರೆಡಿ.