ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಊಹಪೋಹಾಗಳು ನಡೆಯುತ್ತಿರುವಂತೆಯೇ ಈ ವರ್ಷದ ಕೊನೆಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮುಖ್ಯಮಮಂತ್ರಿ ಸ್ಥಾನದ ಕುರ್ಚಿ ಅಲುಗಾಡುವ ಸಂದರ್ಭ ಎದುರಾದಾಗಲೆಲ್ಲಾ ಅವರು ಸಮಾವೇಶ ನಡೆಸುತ್ತಾರೆ. ಅಹಿಂದ ವೋಟ್ ಬ್ಯಾಂಕ್ ಬಳಸಿಕೊಂಡು, ಸಿಎಂ ಸ್ಥಾನದಿಂದ ತನ್ನನ್ನು ಬದಲಾಯಿಸದಂತೆ ಪಕ್ಷದ ಹೈಕಮಾಂಡ್ ಬೆದರಿಸುವ ತಂತ್ರ ಮಾಡುತ್ತಾರೆ ಎಂದರು.
ನೋಡ್ತಾ ಇರಿ, ನವೆಂಬರ್ ಅಥವಾ ಬಿಹಾರ ಚುನಾವಣೆಗೂ ಮೊದಲು ಅಥವಾ ನಂತರ ರಾಜ್ಯದಲ್ಲಿ ಮಹತ್ವದ ರಾಜಕೀಯ ಬದಲಾವಣೆಯಾಗಲಿದೆ ಎಂದು ಅವರು ಹೇಳಿದರು.