ಪ್ರೀತಿ ಎಂದರೆ ಕೇವಲ ಎರಡು ಕಣ್ಣುಗಳಿಂದ ನೋಡೋದು ಅಲ್ಲ, ಅದು ಎರಡು ಮನಸ್ಸುಗಳ ಸಂಘರ್ಷ, ತಾಳ್ಮೆ ಮತ್ತು ಅರ್ಥಮಾಡಿಕೊಳ್ಳುವಿಕೆ. ಒಂದು ಹುಡುಗಿ ನಿಮ್ಮನ್ನು ನಿಜವಾಗಿ ಪ್ರೀತಿಸುತ್ತಿದ್ದಾಳೆ ಎಂದರೆ, ಆ ಪ್ರೀತಿಯ ಸೂಚನೆಗಳು ಅವಳ ನಡವಳಿಕೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಪದಗಳಿಂದ ಮಾತ್ರವಲ್ಲ, ಅವಳು ತೋರಿಸುವ ಕಾಳಜಿಯಿಂದಲೂ ಪ್ರೀತಿ ಮೂಡಿಬರುತ್ತದೆ. ಕೆಲವೊಮ್ಮೆ ಈ ಪ್ರೀತಿ ನೇರವಾಗಿ ವ್ಯಕ್ತವಾಗದೆ, ಸಣ್ಣ ನಡವಳಿಕೆಗಳ ಮೂಲಕ ಬಯಲಾಗುತ್ತವೆ.
ಅವಳು ನಿಮ್ಮ ಹೇಳಿದ ಚಿಕ್ಕ ವಿಷಯಗಳನ್ನು ಸಹ ಮರೆಯುವುದಿಲ್ಲ. ನೀವು ಕಾಫಿ ಇಷ್ಟವಿದೆ ಎಂದು ಹೇಳಿದರೆ, ತುಂಬಾ ಸಮಯದ ನಂತರವೂ ನಿಮಗಾಗಿ ಕಾಫಿ ತರುತ್ತಾಳೆ. ನಿಮ್ಮ ನೆಚ್ಚಿನ ಹಾಡುಗಳು ಅವಳ ಪ್ಲೇಲಿಸ್ಟ್‌ನಲ್ಲಿ ಸೇರಿರುತ್ತವೆ. ಇದು ಪ್ರೀತಿಯ ಒಂದು ಮೃದುವಾದ ರೂಪ.
ಪ್ರೀತಿಯಲ್ಲಿ ಬಿದ್ದ ಹುಡುಗಿ ತನ್ನ ವ್ಯಕ್ತಿತ್ವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾಳೆ. ತನ್ನ ಬಾಲ್ಯದ ನೆನಪುಗಳು, ಭಯಗಳು, ಆಸೆಗಳು ಎಲ್ಲವನ್ನೂ ನಿಮಗೆ ಹೇಳುತ್ತಾಳೆ. ಅವಳ ದಿನಚರಿಯಲ್ಲಿ ನಿಮಗೆ ಸ್ಥಳ ನೀಡುತ್ತಾಳೆ – ಬೆಳಿಗ್ಗೆ ಮೆಸೇಜ್ ಕಳುಹಿಸೋದು ಅಥವಾ ರಾತ್ರಿ “ಗುಡ್ ನೈಟ್” ಹೇಳೋದು ಅವಳ ಅಭ್ಯಾಸವಾಗಿರುತ್ತದೆ.
ಹೆಚ್ಚು ಗಮನಾರ್ಹ ವಿಷಯವೆಂದರೆ, ನೀವು ಬೇಸರದಲ್ಲಿದ್ದೀರಾ, ನೀವು ಏನನ್ನಾದರೂ ಹೇಳುವ ಮೊದಲೇ ಅದನ್ನು ಅವಳು ಮೌನದಿಂದಲೇ ಗ್ರಹಿಸುತ್ತಾಳೆ. ನಿಮ್ಮ ನೆಚ್ಚಿನ ದಿನಾಂಕ, ನಿಮ್ಮೊಂದಿಗೆ ಕಳೆದ ವಿಶೇಷ ಕ್ಷಣಗಳನ್ನು ಎಂದೂ ಮರೆಯೋದಿಲ್ಲ.
ಹುಡುಗಿ ನಿಮ್ಮ ಆರೋಗ್ಯದ ಬಗ್ಗೆ ಕೂಡ ಬಹಳ ಕಾಳಜಿಯಿಂದ ಇರುತ್ತಾರೆ. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಔಷಧಿ, ಆಹಾರ, ಆರೈಕೆ ಎಲ್ಲವನ್ನೂ ಅವಳೇ ನೋಡಿಕೊಳ್ಳುತ್ತಾಳೆ. ನೀವು ಏನೂ ತಿಂದಿಲ್ಲ ಅಂದ್ರೆ, ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿ ಕಳುಹಿಸುತ್ತಾಳೆ ಅಥವಾ ಮನೆಯಲ್ಲೇ ತಯಾರಿಸಿ ತಂದುಕೊಡುತ್ತಾಳೆ.
ನಿಮ್ಮ ಹುಡುಗಿ ಇಷ್ಟೆಲ್ಲಾ ಕಾಳಜಿ ವಹಿಸುತ್ತಿದ್ದಾಳೆ ಅಂದ್ರೆ ಆಕೆ ನಿಮ್ಮನ್ನ ತುಂಬಾನೇ ಪ್ರೀತಿ ಮಾಡ್ತಿದ್ದಾಳೆ ಅಂತ ಅರ್ಥ.