ಯಕ್ಷಗಾನದ ಮೇರು ಕಲಾವಿದರಾದ ಪಾತಾಳ ವೆಂಕಟರಮಣ ಭಟ್ ನಿಧನ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಕ್ಷಗಾನದ ಮೇರು ಕಲಾವಿದರಾದ ಪಾತಾಳ ವೆಂಕಟರಮಣ ಭಟ್ ನಿಧನರಾಗಿದ್ದಾರೆ.
92 ಪ್ರಾಯದ ವೆಂಕಟರಮಣ ಭಟ್ ಅವರು ಹೃದಯಾಘಾತದಿಂದ ಸ್ವಗೃಹ ಉಪ್ಪಿನಂಗಡಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತೆಂಕು ಹಾಗೂ ಬಡಗು ತಿಟ್ಟುಗಳಲ್ಲಿ ವೇಷ ತೊಟ್ಟು ಅಭಿಮಾನಿಗಳ ಮನಸ್ಸನ್ನು ಭಟ್ಟರು ಗೆದ್ದಿದ್ದರು. ಇವರ ಪ್ರತಿಭೆಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.