ಲಂಚ್ ಟೈಮ್‌ನಲ್ಲಿ ಏನಾದರೂ ವಿಶೇಷ ಹಾಗೂ ಜುಸಿ ನಾನ್‌ವೆಜ್ ತಿನ್ಬೇಕು ಅನ್ನಿಸೋದು ಸಹಜ. ಬಾಯಲ್ಲಿ ನೀರೂರಿಸುವ, ಪರಿಮಳದಿಂದಲೇ ಹೊಟ್ಟೆಗೂ ತಟ್ಟುವಂತಹ ಖಾದ್ಯ ಬೇಕಾ? ಹಾಗಿದ್ರೆ ಈ ಮಟನ್ ಸುಕ್ಕಾ ರೆಸಿಪಿ ನಿಮ್ಮ ಮಧ್ಯಾಹ್ನದ ಭೋಜನಕ್ಕೆ ಪರಿಪೂರ್ಣ ಆಯ್ಕೆ.
ಬೇಕಾಗುವ ಸಾಮಗ್ರಿಗಳು
ಮಟನ್ – 1ಕೆಜಿ
ಶುಂಠಿ, ಬೆಳ್ಳುಳ್ಳಿ ಪೇಸ್ಟ್- 2 ಚಮಚ
ಮೆಣಸಿನಪುಡಿ – 4 ಚಮಚ
ಟೊಮೆಟೋ – 4
ಅರಿಶಿಣ- 1 ಚಮಚ
ಅಡುಗೆ ಎಣ್ಣೆ – ಅರ್ಧ ಕಪ್
ರುಚಿಗೆ ತಕ್ಕಷ್ಟು ಉಪ್ಪು
ತುಪ್ಪಾ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ:
ಮೊದಲು ಮಟನ್‌ಗೆ ಅರಿಶಿಣ, ಉಪ್ಪು, ತುಪ್ಪ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಪ್ರೆಷರ್ ಕುಕ್ಕರ್‌ನಲ್ಲಿ 4 ವಿಷಲ್ ಆಗುವವರೆಗೆ ಬೇಯಿಸಿ.
ಈ ನಡುವೆ ಟೊಮೆಟೋಗಳನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಬಾಣೆಲೆಗೆ ಎಣ್ಣೆ ಹಾಕಿ, ಬೇಯಿಸಿದ ಮಟನ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಿಶಿಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಟೊಮೆಟೋ ಪೇಸ್ಟ್, ತುಪ್ಪ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಸುಕ್ಕಾ ಹಾಗೆ ನೀರಿಲ್ಲದಂತೆ ಬೇಯಿಸಿದರೆ ಮಟನ್ ಸುಕ್ಕಾ ತಯಾರಾಗುತ್ತದೆ.