ಭಾರತದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಬನಾರಸಿ ಸೀರೆಗಳು ವೈವಾಹಿಕ ಕಾರ್ಯಕ್ರಮಗಳಿಂದ ಹಿಡಿದು ಧಾರ್ಮಿಕ ಸಮಾರಂಭಗಳವರೆಗೆ ಮಹಿಳೆಯರ ಪ್ರೀತಿಯ ವಸ್ತ್ರವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಕಲಿ ಬನಾರಸಿ ಸೀರೆಗಳ ಮಾರಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಎಚ್ಚರಿಕೆ ವಹಿಸಬೇಕಾಗಿದೆ.
ಆಥೆಂಟಿಕ್ ಸೀರೆಗೆ ಸೊಗಸು ಬೇರೆ:
ಮೂಲ ಬನಾರಸಿ ಸೀರೆಗಳಲ್ಲಿ ನೈಸರ್ಗಿಕ ರೇಶ್ಮೆ ನೂಲಿನಿಂದ ಕೈಯಲ್ಲಿ ನೆಯಲಾಗುತ್ತದೆ. ಇದರಲ್ಲಿ ನಿಖರವಾದ ಜರಿ ಕೆಲಸ, ಅಲಂಕಾರಿಕ ರೂಪಗಳು ಹಾಗೂ ವಿಶಿಷ್ಟ ವಿನ್ಯಾಸಗಳು ಕಂಡುಬರುತ್ತವೆ. ನಕಲಿ ಸೀರೆಗಳಲ್ಲಿ ಈ ಸೊಗಸು ಕಾಣುವುದಿಲ್ಲ. ಕೆಲವೊಮ್ಮೆ ಪೊಲಿಸ್ಟರ್ ಅಥವಾ ನಕಲಿ ಜರಿ ಉಪಯೋಗಿಸುತ್ತಾರೆ. ಶುದ್ಧ ಬನಾರಸಿ ರೇಷ್ಮೆ ಸೀರೆಯ ಸೂಕ್ಷ್ಮತೆಯನ್ನು ನೀವು ಸ್ಪರ್ಶ ಮತ್ತು ಸ್ಪರ್ಶದ ಮೂಲಕ ಪರಿಶೀಲಿಸಬಹುದು.
ಹ್ಯಾಂಡ್‌ಲೂಮ್ ಅಥವಾ ಪವರ್‌ಲೂಮ್?:
ಹ್ಯಾಂಡ್‌ಲೂಮ್ ಬನಾರಸಿ ಸೀರೆಗಳ ಬೆಲೆ ಹೆಚ್ಚು ಇರುತ್ತದೆ. ಆದರೆ ಕೆಲವು ವ್ಯಾಪಾರಸ್ಥರು ಪವರ್‌ಲೂಮ್ ಸೀರೆಗಳನ್ನು ಹ್ಯಾಂಡ್‌ಲೂಮ್ ಎಂದು ಹೇಳಿ ಮೋಸ ಮಾಡುವುದು ಇದೆ. ಖರೀದಿಸುವಾಗ ಹ್ಯಾಂಡ್‌ಲೂಮ್ ಸರ್ಟಿಫಿಕೇಟು (GI tag, Handloom Mark) ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಸೀರೆಯ ಮೇಲ್ಭಾಗ/ಕೆಳಭಾಗದಲ್ಲಿ ಸಮಾನ ಅಂತರದಲ್ಲಿ ಪಿನ್ ಹೋಲ್ ಗುರುತುಗಳು ಇರಬಹುದು. ಈ ವೈಶಿಷ್ಟ್ಯವು ಇದು ಕೈಮಗ್ಗ ಉತ್ಪನ್ನ ಎಂದು ಸೂಚಿಸುತ್ತದೆ.
ಮೋಸ ಹೋಗಬೇಡಿ
ಅಸಲಿ ಬನಾರಸಿ ಸೀರೆ 1000 ಕ್ಕೆ ಎಂಬಂತೆ ನೀಡುವ ಆಫರ್‌ಗಳು ಮೋಸವಾಗಿರಬಹುದು. ಒಂದು ನೈಜ ಬನಾರಸಿ ಸೀರೆ ತಯಾರಿಸಲು ಕನಿಷ್ಠ 15 ದಿನ ಹಿಡಿಯುತ್ತಿದ್ದು, ನೂಲಿನ ಗುಣಮಟ್ಟ, ಜರಿಯ ನಿಖರತೆ ಇತ್ಯಾದಿ ಪರಿಗಣಿಸಿದರೆ ಇದರ ಮೌಲ್ಯ 8000-50,000 ರವರೆಗೆ ಇರಬಹುದು.
ಖರೀದಿ ಸ್ಥಳ:
ಪರಿಚಿತ ಅಂಗಡಿ, ಬೆಂಬಲಿತ ಹ್ಯಾಂಡ್‌ಲೂಮ್ ಅಂಗಡಿ ಅಥವಾ ಸರ್ಕಾರಿ ಸಹಕಾರಿ ಅಂಗಡಿಗಳಲ್ಲಿ ಖರೀದಿಸುವುದು ಉತ್ತಮ. ಜೊತೆಗೆ ಸಿಲ್ಕ್ ಮಾರ್ಕ್ ಟ್ಯಾಗ್ ಹೊಂದಿರುವ ಸೀರೆ ಖರೀದಿ ಮಾಡಿ. ಇದು ರೇಷ್ಮೆಯ ಶುದ್ಧತೆಯನ್ನು ಖಚಿತಪಡಿಸುತ್ತದೆ. ಇದು ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟ ಸಿಲ್ಕ್ ಮಾರ್ಕ್‌ಗೆ ಖಾತರಿಯಾಗಿದೆ.