ಸೀರೆ ಹಾಗೂ ಲೆಹಂಗಾ ಧರಿಸುವ ಮಹಿಳೆಯರಲ್ಲಿ ಪ್ಯಾಡೆಡ್ ಬ್ಲೌಸ್‌ಗಳ ಬಳಕೆ ದಿನೇದಿನೆಗೆ ಹೆಚ್ಚುತ್ತಿದೆ. ಇದು ಆಕರ್ಷಕ ರೂಪ ನೀಡುವುದಲ್ಲದೇ, ಅಳತೆಗಾಗಿ ಎಕ್ಸ್ಟ್ರಾ ಇನರ್ ಧರಿಸಬೇಕಾದ ಅನಿವಾರ್ಯತೆಯನ್ನು ಕಡಿಮೆ ಮಾಡುತ್ತದೆ. ಆದರೆ ಇಂತಹ ಬ್ಲೌಸ್‌ಗಳನ್ನು ಒಟ್ಟಾರೆ ತೊಳೆಯುವ ಹಾಗಿಲ್ಲ. ಹಾಗೇನಾದ್ರೂ ತೊಳೆದರೆ ಅದರ ಪ್ಯಾಡ್ ಶೇಪ್ ಹಾಳಾಗಬಹುದು ಅಥವಾ ಬ್ಲೌಸ್ ಹಾಳಾಗಬಹುದು.
ಕೈಯಲ್ಲಿ ತೊಳೆಯುವುದು ಉತ್ತಮ:
ಪ್ಯಾಡೆಡ್ ಬ್ಲೌಸ್ ಅನ್ನು ಯಂತ್ರದಲ್ಲಿ ತೊಳೆಯುವುದು ಬೇಡ. ಕೈಯಲ್ಲಿ ಸ್ವಲ್ಪ ಮೈಲ್ಡ್ ಡಿಟರ್ಜೆಂಟ್ ಹಾಕಿ ನನೆಸಿದ ನಂತರ ಮೃದುವಾಗಿ ಒತ್ತಿ ತೊಳೆಯಬೇಕು. ಶಕ್ತಿ ಹಾಕಿ ಒರೆಸಿದರೆ ಪ್ಯಾಡ್‌ನ ಶೇಪ್ ಹಾಳಾಗಬಹುದು.
ಬಿಸಿಯಾದ ನೀರನ್ನು ಹಾಕಬೇಡಿ:
ಬಿಸಿ ನೀರು ಅಥವಾ ರಾಸಾಯನಿಕಯುಕ್ತ ಡಿಟರ್ಜೆಂಟ್ ಬಳಸುವುದು ಬೇಡ. ಇದು ಬ್ಲೌಸ್ ಫ್ಯಾಬ್ರಿಕ್ ಹಾಗೂ ಪ್ಯಾಡ್‌ನ ಮೌಲ್ಯ ಹಾಳುಮಾಡುತ್ತೆ. ತಣ್ಣಗಿನ ನೀರಿನಲ್ಲಿ ತೊಳೆಯುವುದು ಉತ್ತಮ.
ಬಿಸಿಲಿನಲ್ಲಿ ಒಣಗಿಸಬೇಡಿ:
ಪ್ಯಾಡೆಡ್ ಬ್ಲೌಸ್‌ಗಳನ್ನು ನೇರ ಬಿಸಿಲಿನಲ್ಲಿ ಒಣಗಿಸುವ ಬದಲು ನೆರಳಿನ ಸ್ಥಳದಲ್ಲಿ ಸ್ಥಳದಲ್ಲಿ ಒಣಗಿಸಬೇಕು. ಬಿಸಿಲಿನಿಂದ ಪ್ಯಾಡ್ ಗಾತ್ರ ಹಾಗೂ ಬಣ್ಣ ಬದಲಾಗುವ ಸಂಭವವಿರುತ್ತದೆ.
ತೊಳೆದು ತಕ್ಷಣ ಶೇಪ್ ಕೊಡಬೇಕು:
ಬ್ಲೌಸ್ ತೊಳೆಯಾದ ನಂತರ, ಪ್ಯಾಡ್ ಅನ್ನು ಕೈಯಿಂದ ಸಿಂಪ್ಲಿ ಪ್ರೆಸ್ ಮಾಡಿ, ಅದರ ನೈಸರ್ಗಿಕ ಶೇಪ್ ನೀಡಿ. ಇದರಿಂದ ಅದು ಒಣಗಿದ ನಂತರವೂ ತನ್ನ ಮೂಲ ರೂಪ ಉಳಿಸಿಕೊಳ್ಳುತ್ತದೆ.
ಪ್ಯಾಡೆಡ್ ಬ್ಲೌಸ್ ಸ್ಟೈಲಿಷ್ ಆಯ್ಕೆ ಮಾತ್ರವಲ್ಲದೇ, ಆರಾಮದಾಯಕ ಆಯ್ಕೆಯೂ ಆಗಿದೆ. ಆದರೆ ಅದನ್ನು ಸರಿಯಾಗಿ ತೊಳೆಯುವ ಕ್ರಮವನ್ನು ಪಾಲಿಸಿದರೆ ಮಾತ್ರ ಅದು ಹೆಚ್ಚು ದಿನಗಳವರೆಗೆ ಬಾಳಿಕೆ ಬರಲು ಸಾಧ್ಯ.