ಬೆಳಗ್ಗೆ ರುಚಿಕರವಾದ ಹಾಗೂ ಬೇಗನೆ ತಯಾರಿಸಬಹುದಾದ ಆಹಾರ ಅಂದ್ರೆ ಅದು, ಕ್ಯಾಪ್ಸಿಕಂ ರೈಸ್ ಬಾತ್. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ರೈಸ್ ಬಾತ್ ನಿಮ್ಮ ನಾಲಿಗೆಯ ರುಚಿಗೆ ಕೊಡುವುದರ ಜೊತೆಗೆ ಆರೋಗ್ಯಕ್ಕೂ ಸಹಕಾರಿ.
ಬೇಕಾಗುವ ಸಾಮಗ್ರಿಗಳು:
ಅನ್ನ – 2 ಕಪ್
ಈರುಳ್ಳಿ – 1
ಹಸಿಮೆಣಸು – 3
ಶುಂಠಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – ಸ್ವಲ್ಪ
ಸಾಸಿವೆ – 1 ಚಮಚ
ಉದ್ದಿನ ಬೇಳೆ – ಅರ್ಧ ಚಮಚ
ಅರಶಿಣ – ಅ ಚಮಚ
ಕ್ಯಾಪ್ಸಿಕಂ – 1 ದೊಡ್ಡದು
ಟೊಮೇಟೊ – 1
ಗರಮ್ ಮಸಾಲಾ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆ ಹಾಗೂ ಕರಿಬೇವಿನ ಎಸಳನ್ನು ಹಾಕಿ ಒಗ್ಗರಣೆ ತಯಾರಿಸಿ. ನಂತರ ಹೆಚ್ಚಿದ ಈರುಳ್ಳಿ ಮತ್ತು ಟೊಮೇಟೊವನ್ನು ಸೇರಿಸಿ, ಅರಶಿಣ ಮತ್ತು ಗರಂ ಮಸಾಲಾ ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ಸಣ್ಣಗೆ ಹೆಚ್ಚಿರುವ ಕ್ಯಾಪ್ಸಿಕಂಅನ್ನು ಮಿಶ್ರಣಕ್ಕೆ ಸೇರಿಸಿ, 5 ನಿಮಿಷ ಮುಚ್ಚಿಡಿ. ಬಳಿಕ ಮೊದಲೇ ಬೇಯಿಸಿ ಇಟ್ಟಿರುವ ಅನ್ನವನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ ಸ್ವಲ್ಪ ಬೇಯಿಸಿ. ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರ ಮಾಡಿದರೆ ಕ್ಯಾಪ್ಸಿಕಂ ರೈಸ್ ಬಾತ್ ರೆಡಿ.