ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಆಭರಣ ಖರೀದಿಸಲು ಉತ್ಸುಕರಾಗಿರುವ ಗ್ರಾಹಕರಿಗೆ ಅಚ್ಚರಿ ತಂದಿದೆ. ವಿಶೇಷವಾಗಿ 24 ಕ್ಯಾರೆಟ್ ಚಿನ್ನದ ಬೆಲೆ 1,00,040ಕ್ಕೆ ತಲುಪಿದೆ.
ಈ ನಡುವೆ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 91,700 ರಿಂದ ಆರಂಭವಾಗಿ ಕೆಲವೆಡೆ 91,850 ರವರೆಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ 91,700 ಹಾಗೂ 24 ಕ್ಯಾರೆಟ್ ದರ 1,00,040 ದಾಖಲಾಗಿದೆ. ಇದೇ ರೀತಿ ಮುಂಬೈ, ಚೆನ್ನೈ, ಕೋಲ್ಕತಾ, ಅಹ್ಮದಾಬಾದ್, ಕೇರಳ ಮುಂತಾದ ಪ್ರಮುಖ ನಗರಗಳಲ್ಲೂ ಈ ಬೆಲೆಗಳು ದಾಖಾಲಾಗಿವೆ. ದೆಹಲಿ, ಜೈಪುರ ಮತ್ತು ಲಕ್ನೋದಲ್ಲಿ 22 ಕ್ಯಾರೆಟ್ ಚಿನ್ನದ ದರ 91,850ಗೆ ತಲುಪಿದೆ.
ಬೆಳ್ಳಿ ಬೆಲೆ ಕೂಡಾ ಗ್ರಾಂಗೆ 2ರಷ್ಟು ಏರಿಕೆಯಾಗಿ 10 ಗ್ರಾಂಗೆ 1,160 ಮತ್ತು 100 ಗ್ರಾಂಗೆ 11,600 ಗೆ ತಲುಪಿದೆ. ಚೆನ್ನೈ, ಕೇರಳ ಮತ್ತು ಭುವನೇಶ್ವರ್ ನಲ್ಲಿ 100 ಗ್ರಾಂ ಬೆಳ್ಳಿ ಬೆಲೆ 12,600 ಆಗಿದ್ದು, ಉಳಿದ ನಗರಗಳಲ್ಲಿ 11,600 ರೂಪಾಯಿ ವರಿಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಿನ್ನದ ದರದಲ್ಲಿರುವ ವ್ಯತ್ಯಾಸ ಗಮನಾರ್ಹವಾಗಿದೆ. ಮಲೇಷ್ಯಾದಲ್ಲಿ 10 ಗ್ರಾಂ ಚಿನ್ನದ ಬೆಲೆ 91,110, ಅಮೆರಿಕದಲ್ಲಿ 90,030, ಸಿಂಗಾಪುರದಲ್ಲಿ 89,610 ಹಾಗೂ ದುಬೈನಲ್ಲಿ 87,840 ಆಗಿದೆ.