ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೈರೆಕ್ಟರ್ ಸತ್ಯ ಪ್ರಕಾಶ್ ಅಭಿನಯದ ಮತ್ತು ವಿಭಿನ್ನ ಕಥಾ ಹಂದರದ ಮೂಲಕ ಗಮನ ಸೆಳೆದಿರುವ ಕನ್ನಡ ಚಿತ್ರ ‘X&Y’, ಬಿಡುಗಡೆಯಾದ ಕೇವಲ ಒಂದು ತಿಂಗಳೊಳಗೇ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಬರಲಿದ್ದು, ಜುಲೈ 25ರಿಂದ ಸನ್‌ನೆಕ್ಸ್ಟ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸನ್ ನೆಟ್‌ವರ್ಕ್ ಸಂಸ್ಥೆ ಈ ಚಿತ್ರದ ಓಟಿಟಿ ಸ್ಟ್ರೀಮಿಂಗ್ ಹಕ್ಕು ಪಡೆದಿದ್ದು, ಈಗ ಅಧಿಕೃತವಾಗಿ ಈ ಕುರಿತು ಘೋಷಣೆ ಮಾಡಿದೆ.
‘X&Y’ ಸಿನಿಮಾ ಜೂನ್ 26ರಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಬಿಡುಗಡೆಯ ಮೊದಲ ದಿನದಿಂದಲೂ ಈ ಚಿತ್ರ ವಿಭಿನ್ನ ಶೈಲಿ, ಕಥೆ ಮತ್ತು ತಂತ್ರಜ್ಞಾನದ ದೃಷ್ಠಿಯಿಂದ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಸಿನಿಮಾದಲ್ಲಿ ‘ರಾಮಾ ರಾಮಾ ರೇ’ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಈ ಚಿತ್ರದಲ್ಲಿ ಹೀರೋ ಅಲ್ಲ, ಕೇವಲ ಪಾತ್ರವೊಂದನ್ನೇ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಅಥರ್ವ ಪ್ರಕಾಶ್ ನಾಯಕನಾಗಿ ಅಭಿನಯಿಸಿದ್ದಾರೆ. ಬೃಂದಾ ಆಚಾರ್ಯ ನಾಯಕಿಯಾಗಿ, ಕೌಶಿಕ್ ಹರ್ಷ ಸಂಗೀತ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣ ಲವಿತ್ ಅವರದು. ಈ ಚಿತ್ರ ‘ಇನ್ನೂ ಹುಟ್ಟಿರದ ಆತ್ಮಕತೆ’ ಎಂಬ ವಿಶೇಷ ತತ್ವಾಧಾರಿತ ಕಥೆಯನ್ನು ಆಧರಿಸಿದೆ. ಮೃತಾತ್ಮನೊಬ್ಬನು ತನ್ನ ಹೆತ್ತವರನ್ನು ಹುಡುಕುತ್ತಿರುವ ನಿರೂಪಣೆಯೊಂದಿಗೆ ವಿಭಿನ್ನ ಭಾವನಾತ್ಮಕ ಪ್ರಯಾಣವನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಒಟ್ಟಾರೆ, ಜುಲೈ 25ರಂದು ಸನ್‌ನೆಕ್ಸ್ಟ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ಸಿನಿಮಾ ಓಟಿಟಿ ಪ್ರೇಕ್ಷಕರಲ್ಲಿ ವಿಶೇಷ ಕುತೂಹಲ ಹುಟ್ಟಿಸಿದ್ದು, ಥಿಯೇಟರ್‌ನಲ್ಲಿ ನೋಡಲಾಗದವರು ಈಗ ಮನೆದಲ್ಲಿಯೇ ನೋಡಬಹುದಾದ ಅವಕಾಶವಿದು.