ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಕೆ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್. ಆತ ಸಿಆರ್ಪಿಎಫ್ ಯೋಧ. ಕಳೆದ ಎರಡು ವರ್ಷಗಳಿಂದ ಇಬ್ಬರೂ ಲೀವ್-ಇನ್ ಪಾರ್ಟ್ನರ್ ಆಗಿದ್ದರು. ಆದ್ರೆ ಯಾವುದೋ ಕಾರಣಕ್ಕೆ ಕೋಪಗೊಂಡು ಯೋಧ, ಮಹಿಳಾ ಪೊಲೀಸ್(Police) ಅಧಿಕಾರಿಯನ್ನು ಕೊಲೆ ಮಾಡಿ ಕೊನೆಗೆ ಅವರು ನಿಯೋಜನೆಗೊಂಡಿದ್ದ ಪೊಲೀಸ್ ಠಾಣೆಯಲ್ಲೇ ಶರಣಾಗಿರುವ ಘಟನೆ ಗುಜರಾತ್ನ ಕಚ್ ಜಿಲ್ಲೆಯಲ್ಲಿ ನಡೆದಿದೆ.
ಅರುಣಾ ನಟುಭಾಯಿ ಜಾಧವ್ ಜೀವ ಕಳೆದುಕೊಂಡ ಮಹಿಳಾ ಪೊಲೀಸ್ ಅಧಿಕಾರಿ. ಇವರು ಗುಜರಾತ್ ರಾಜ್ಯದ ಕಚ್ ಜಿಲ್ಲೆಯಲ್ಲಿ ASI ಆಗಿ ನಿಯೋಜನೆಗೊಂಡಿದ್ದರು. ದಿಲೀಪ್ ದಂಗ್ಚಿಯಾ, ಆರೋಪಿತ ಸಿಆರ್ಪಿಸಿ (Central Reserve Police Force) ಜವಾನ್.
ಇವರಿಬ್ಬರು ಗುಜರಾತ್ನ ಸುರೇಂದ್ರ ನಗರದ ಗಂಗೋತ್ರಿ ಸೊಸೈಟಿ-2ಯಲ್ಲಿ ವಾಸವಿದ್ದರು. ಕಳೆದ ಶುರುಕ್ರವಾರ ರಾತ್ರಿ ಇಬ್ಬರ ಮಧ್ಯೆ ಗಲಾಟೆ ಆಗಿದೆ. ಗಲಾಟೆ ಜೋರಾಗಿ, ದಿಲೀಪ್ ತಾಳ್ಮೆ ಕಳೆದುಕೊಂಡಿದ್ದಾನೆ. ಏಕಾಏಕಿ ಅರಣಾ ಅವರು ಕತ್ತು ಹಿಸುಕಿದ್ದಾರೆ. ಪರಿಣಾಮ ಅರುಣಾ ಜೀವಕಳೆದುಕೊಂಡಿದ್ದಾಳೆ. ಮಾರನೇಯ ದಿನ ದಿಲೀಪ್ ಅಂಜರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸ್ತಿದ್ದಾರೆ.