ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡೋನೇಷ್ಯಾದ ಭೀಕರ ಹಡಗು ದುರಂತ ಸಂಭವಿಸಿದ್ದು, 280 ಮಂದಿ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 3 ಮಂದಿ ಸಾವನ್ನಪ್ಪಿದ್ದಾರೆ.
KM ಬಾರ್ಸಿಲೋನಾ VA ಹಡಗಿನಲ್ಲಿ ಭಾನುವಾರ ಅಗ್ನಿ ದುರಂತ ಸಂಭವಿಸಿದೆ. ಇಂದು ಮಧ್ಯಾಹ್ನ ಉತ್ತರ ಸುಲವೇಸಿ ಪ್ರಾಂತ್ಯದ ತಾಲಿಸ್ ದ್ವೀಪದ ಬಳಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
ಪ್ರಯಾಣಿಕರು ಆತಂಕಗೊಂಡು ಲೈಫ್ ಜಾಕೆಟ್‌ಗಳನ್ನು ಧರಿಸಿ, ಸಹಾಯಕ್ಕಾಗಿ ಕೂಗುತ್ತಾ, ದಟ್ಟವಾದ ಕಪ್ಪು ಹೊಗೆ ಮತ್ತು ಜ್ವಾಲೆಗಳ ನಡುವೆಯೇ ನೀರಿಗೆ ಹಾರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಹಡಗಿನಲ್ಲಿ ಸುಮಾರು 280 ರಿಂದ 300 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬೆಂಕಿ ಕಾಣಿಸಿಕೊಂಡಾಗ ಹಡಗು ತಲೌಡ್ ದ್ವೀಪದಿಂದ ಮನಾಡೊ ನಗರಕ್ಕೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇಂಡೋನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ, ನೌಕಾಪಡೆ, ಕರಾವಳಿ ಕಾವಲು ಪಡೆ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳೀಯ ಮೀನುಗಾರರ ಜೊತೆಗೆ, ಹಡಗಿನಲ್ಲಿರುವವರನ್ನು ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
: ಇಸ್ಕಾನ್ ದೇವಾಲಯದ (ಶ್ರೀಕೃಷ್ಣ ದೇವಾಲಯ) ಗೋವಿಂದ ರೆಸ್ಟೊರಂಟ್ ಒಳಗೆ ನುಗ್ಗಿದ ವ್ಯಕ್ತಿಯೊಬ್ಬ ಅಲ್ಲಿಯೇ ತಾನು ತಂದಿದ್ದ ಚಿಕನ್ ಸೇವಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಲಂಡನ್ ನ 10 ಸೊಹೊ ಸ್ಟ್ರೀಟ್ ನಲ್ಲಿರುವ ಇಸ್ಕಾನ್ ದೇಗುಲದ ಆವರಣದಲ್ಲಿರುವ ಗೋವಿಂದ ರೆಸ್ಟೊರಂಟ್ ನಲ್ಲಿ ಈ ಘಟನೆ ನಡೆದಿದ್ದು, ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಚಿಕನ್ ಸೇವಿಸಿ ಮಾತ್ರವಲ್ಲದೇ ಅಲ್ಲಿನ ಸಿಬ್ಬಂದಿಗಳಿಗೂ ನೀವೂ ತಿನ್ನಿ ಎಂದು ಕೇಳಿದ್ದಾನೆ.
ಗೋವಿಂದ ರೆಸ್ಟೋರೆಂಟ್ ಒಳಗೆ ಚಿಕನ್ ತಂದ ವ್ಯಕ್ತಿಯನ್ನು ಆಫ್ರಿಕನ್ ಮೂಲದ ಇಂಗ್ಲೆಂಡ್ ನಾಗರಿಕ ಸ್ಯಾಂಜೊ ಎಂದು ಗುರುತಿಸಲಾಗಿದ್ದು, ಈತ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
African citizen enters ISKCON’s Govinda restaurant and eats chicken
ವಿಲಕ್ಷಣ: ‘Islam ಗೆ ಮತಾಂತರವಾಗಲಿಲ್ಲ ಎಂದು HIV ಇಂಜೆಕ್ಷನ್ ಚುಚ್ಚಿದ್ರು’.. Hindu ಮಂಗಳ ಮುಖಿಯರ ಗಂಭೀರ ಆರೋಪ!, ತನಿಖೆಗೆ ಆದೇಶ!
ಇಷ್ಟಕ್ಕೂ ಆಗಿದ್ದೇನು?
ಗೋವಿಂದ ರೆಸ್ಟೊರಂಟ್‌ಗೆ ತೆರಳಿದ್ದ ಯುವಕ ಸ್ಯಾಂಜೋ, ಮೊದಲಿಗೆ ಅಲ್ಲಿನ ಸಿಬ್ಬಂದಿಗೆ, ‘ಇಲ್ಲಿ ಮಾಂಸ ಸಿಗುತ್ತದಾ? ಮಾಂಸ ಬೇಕು‘ ಎಂದು ಕೇಳಿದ್ದಾನೆ. ಇದಕ್ಕೆ ಸಿಬ್ಬಂದಿ ಇಲ್ಲ. ಇದು ದೇಗುಲಕ್ಕೆ ಸಂಬಂಧಿಸಿದ ರೆಸ್ಟೋರೆಂಟ್ ಆಗಿದ್ದು, ಇಲ್ಲಿ ಸಸ್ಯಾಹಾರಿ ಖ್ಯಾದ್ಯಗಳು ಮಾತ್ರ ಸಿಗುತ್ತದೆ ಎಂದು ಹೇಳಿದ್ದಾರೆ. ಆದರೆ ಆ ಯುವಕ ಕೂಡಲೇ ತನ್ನ ಚೀಲದಲ್ಲಿನ ಕೆಎಫ್‌ಸಿ ಚಿಕನ್ ಅನ್ನು ತೆರೆದು ಅಲ್ಲಿಯೇ ತಿನ್ನಲು ಶುರು ಮಾಡಿದ್ದಾನೆ. ಇದರಿಂದ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ.
ತನ್ನ ಕೃತ್ಯ ಮುಂದುವರೆಸಿದ ಆ ಯುವಕ ಗೋವಿಂದ ರೆಸ್ಟೊರಂಟ್‌ನಲ್ಲಿ ಮತ್ತೆ ಹುಚ್ಚಾಟ ಪ್ರದರ್ಶಿಸಿದ್ದಾನೆ. ಅಲ್ಲಿದ್ದವರಿಗೆ ನಿಮಗೆ ಚಿಕನ್ ಬೇಕೆ? ಚಿಕನ್ ತಿನ್ನುತ್ತೀರಾ? ಎಂದು ಕೇಳಿದ್ದಾನೆ. ಅಲ್ಲಿದ್ದ ಬಹುತೇಕರು ಯುವಕನ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಸಿಬ್ಬಂದಿ ಆ ಯುವಕನನ್ನು ಅಲ್ಲಿಂದ ಹೊರದಬ್ಬಿ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ADVERTISEMENT
Aritifical Inteligence usesAritifical Inteligence uses
ವ್ಯಾಪಕ ಆಕ್ರೋಶ
ಇನ್ನು ಯುವಕ ರೆಸ್ಟೋರೆಂಟ್ ನಲ್ಲಿ ಈ ರೀತಿಯ ಹುಚ್ಚಾಟ ನಡೆಸುತ್ತಿರುವಾಗಲೇ ಅಲ್ಲಿದ್ದ ಭಾರತ ಮೂಲದ ಭಕ್ತರು ಆತನಿಗೆ ಬುದ್ದಿ ಹೇಳುವ ಪ್ರಯತ್ನ ಕೂಡ ಮಾಡಿದ್ದಾರೆ. ಇದು ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಇನ್ನೊಬ್ಬ ಗ್ರಾಹಕ ಆತನನ್ನು ತಡೆಯುತ್ತಾ, “ಕ್ಷಮಿಸಿ, ನೀವು ಇಲ್ಲಿನ ನಿಯಮಗಳನ್ನು ಉಲ್ಲಂಘಿಸುತ್ತಿದ್ದೀರಿ. ಇದು ಸರಿಯಲ್ಲ.. ಎಂದರೂ ತನ್ನ ವರ್ತನೆಯನ್ನು ಮುಂದುವರೆಸುತ್ತಾನೆ. ನಂತರ ಘಟನೆ ಬಿಗಡಾಯಿಸುತ್ತಲ್ಲೇ ಭದ್ರತಾ ಸಿಬ್ಬಂದಿ ಅವನನ್ನು ಹೊರ ಕಳುಹಿಸಿದ್ದಾರೆ. ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಲೇ ಯುವಕನ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದು ನೋಡಲು ಪ್ರಾಂಕ್ ವಿಡಿಯೋ ರೀತಿ ಕಂಡರೂ ಇದನ್ನು ಸಹಿಸಲಸಾಧ್ಯ.. ಧಾರ್ಮಿಕ ಭಾವನೆಗಳೊಂದಿಗೆ ಆಟ ಬೇಡ.. ಇದರಿಂದ ಆತ ಸಾಧಿಸಿದ್ದು ಏನು ಎಂದು ಎಕ್ಸ್‌ನಲ್ಲಿ ಭಕ್ತರೊಬ್ಬರು ಕಿಡಿಕಾರಿದ್ದಾರೆ. ಮತ್ತೋರ್ವ ಖಾತೆದಾರರು, ‘ಜನಾಂಗೀಯ ದ್ವೇಷ ಅಥವಾ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ’ ಎಂದು ಪ್ರತಿಕ್ರಿಯಿಸಿದ್ದಾರೆ.