ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ಅಜಿತ್ ಕಮಾರ್ ಗೆ ಕಾರು ರೇಸಿಂಗ್‌ನಲ್ಲಿ ತುಂಬಾ ಆಸಕ್ತಿ. ರೇಸರ್ ಆಗಿರುವ ಅಜಿತ್ ಕುಮಾರ್ ಸಿನಿಮಾದಿಂದ ಬ್ರೇಕ್ ಪಡೆದು ಸತತವಾಗಿ ಕಾರು ರೇಸಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಅಜಿತ್ ಕಾರು ಒಂದಲ್ಲ ಒಂದು ಕಾರಣದಿಂದ ಅಪಘಾತಕ್ಕೀಡಾಗುತ್ತಿದೆ. ಇದೀಗ ಇಟಲಿಯಲ್ಲಿ ನಡೆಯುತ್ತಿರುವ ಕಾರು ರೇಸಿಂಗ್‌ನಲ್ಲಿ ಅಜಿತ್ ಕುಮಾರ್ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಇಟಲಿಯಲ್ಲಿ ನಡೆಯುತ್ತಿರುವ GT4 ಕಾರ್ ರೇಸ್‌ನಲ್ಲಿ ಅಜಿತ್ ಕುಮಾರ್ ಅವರ ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.
ಇಟಲಿಯಲ್ಲಿ ನಡೆಯುತ್ತಿರುವ GT4 ಕಾರ್ ರೇಸ್‌ನ 2ನೇ ದಿನದಂದು ಅಜಿತ್ ಕುಮಾರ್ ಅವರ ಕಾರು ಟ್ರ್ಯಾಕ್‌ನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಅಜಿತ್ ಕಾರಿನ ಮುಂದೆ ಹೋಗುತ್ತಿದ್ದ ಕಾರು ಟ್ರ್ಯಾಕ್‌ನಲ್ಲಿ ನಿಂತಿದ್ದರಿಂದ ಅಜಿತ್ ಕುಮಾರ್ ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಅಜಿತ್‌ಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಅಜಿತ್ ಕಾರು ಹಾನಿಗೊಳಗಾಗಿದೆ. ಹೆಚ್ಚಿನ ಸುರಕ್ಷತೆ ಹೊಂದಿದ್ದ ಕಾರಣ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಮೊದಲು ದುಬೈ ಕಾರ್ ರೇಸ್ ಆರಂಭವಾಗುವ ಮೊದಲು ಅಜಿತ್ ಅಭ್ಯಾಸದಲ್ಲಿದ್ದಾಗ ಬ್ರೇಕ್ ವೈಫಲ್ಯದಿಂದ ಕಾರು ಅಪಘಾತಕ್ಕೀಡಾಯಿತು. ದುಬೈ ಕಾರ್ ರೇಸ್ ಸರಣಿಯ ನಂತರ ಪೋರ್ಚುಗಲ್‌ನಲ್ಲಿ ನಡೆದ ಕಾರ್ ರೇಸ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಅನಿರೀಕ್ಷಿತವಾಗಿ ಕಾರು ಅಪಘಾತಕ್ಕೀಡಾದರು.