ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ ತಾನು ಸಿದ್ಧ ಎಂದು ರಷ್ಯಾ ಹೇಳಿಕೊಂಡಿದೆ. ಆದ್ರೆ ಈ ಮಾತುಕತೆ ನಡೆಯಲು ಪ್ರಮುಖ ಷರತ್ತುಗಳನ್ನೂ ಹಾಕಿದೆ.
ರಷ್ಯಾ ಆಡಳಿತದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ,‘ಉಕ್ರೇನ್ ವಿಚಾರದಲ್ಲಿ ಆದಷ್ಟೂ ಬೇಗ ಶಾಂತಿ ನೆಲಸಲು ಬಯಸುತ್ತಿರುವುದಾಗಿ ರಷ್ಯಾ ಅಧ್ಯಕ್ಷ ಪುಟಿನ್ ಬಾರಿ ಬಾರಿ ಹೇಳುತ್ತಾ ಬಂದಿದ್ದಾರೆ. ಇದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಅಷ್ಟು ಸುಲಭದ ಕೆಲವಲ್ಲ, ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ನಮ್ಮ ಗುರಿಗಳು ಈಡೇರುವುದು ನಮಗೆ ಬಹಳ ಮುಖ್ಯ’ ಎಂದು ತಿಳಿಸಿದ್ದಾರೆ.
ಏನಿವೆ ರಷ್ಯಾದ ಷರತ್ತುಗಳು?
ಉಕ್ರೇನ್ ದೇಶಕ್ಕೆ ನ್ಯಾಟೊ ಸದಸ್ಯತ್ವ ನೀಡಬಾರದು.
ರಷ್ಯಾ ವಿರುದ್ಧ ವಿಧಿಸಿರುವ ಎಲ್ಲಾ ರೀತಿಯ ನಿಷೇಧಗಳನ್ನು ಹಿಂಪಡೆಯಬೇಕು.
ಉಕ್ರೇನ್ ಅನ್ನು ನಾಜಿವಾದಿಗಳಿಂದ ಮುಕ್ತಗೊಳಿಸಬೇಕು. ಆ ದೇಶದ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಬಾರದು.
ಉಕ್ರೇನ್ನಲ್ಲಿ ರಷ್ಯಾ ತನ್ನ ಪ್ರದೇಶಗಳೆಂದು ಪರಿಗಣಿಸುವ ಡೊನೆಸ್ಕ್, ಲುಹಾನ್ಸ್ಕ್, ಖೆರ್ಸೋನ್, ಝಾಪೋರಿಝಿಯಾದಲ್ಲಿ ಉಕ್ರೇನ್ ಸೇನಾ ಪಡೆಗಳು ಪೂರ್ಣವಾಗಿ ಹೊರಹೋಗಬೇಕು. ಅವು ರಷ್ಯನ್ ಪ್ರದೇಶಗಳೆಂದು ಪರಿಗಣಿಸಬೇಕು.
ರಷ್ಯಾದ ಪ್ರಮುಖ ಬೇಡಿಕೆಗಳನ್ನು ಉಕ್ರೇನ್ ಮೇಲೆ ಎರಗಿ ಹೋಗಿದ್ದು. ಮೂರ್ನಾಲ್ಕು ವರ್ಷಗಳಾದರೂ ಯುದ್ಧ ಇನ್ನೂ ಮುಗಿದಿಲ್ಲ. ಉಕ್ರೇನ್ಗೆ ಪಾಶ್ಚಿಮಾತ್ಯ ದೇಶಗಳು ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿರುವುದರಿಂದ ರಷ್ಯಾಗೆ ಈ ಯುದ್ಧ ಗೆಲ್ಲಲು ಸಾಧ್ಯವಾಗಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ವಿರುದ್ಧ ಕಠಿಣ ಧೋರಣೆ ಅನುಸರಿಸಲು ಆರಂಭಿಸಿದೆ. ಪೇಟ್ರಿಯಾಟ್ ಮಿಸೈಲ್ ಡಿಫೆನ್ಸ್ ಸಿಸ್ಟಂಗಳು ಸೇರಿದಂತೆ ಉಕ್ರೇನ್ಗೆ ಹೊಸ ಮಿಲಿಟರಿ ನೆರವಿನ ಪ್ಯಾಕೇಜ್ ಪ್ರಕಟಿಸಿದೆ. 50 ದಿನದೊಳಗೆ ಕದನ ವಿರಾಮಕ್ಕೆ ಒಪ್ಪದಿದ್ದರೆ ಮತ್ತಷ್ಟು ನಿಷೇಧ ಕ್ರಮಗಳನ್ನು ಜಾರಿಗೆ ತರುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಇತ್ತ, ಉಕ್ರೇನ್ ಅಧ್ಯಕ್ಷ ವೊಲೋಡಿಜಿರ್ ಝೆಲೆನ್ಸ್ಕಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ನೇರಾನೇರ ಮಾತುಕತೆಗೆ ಸಿದ್ಧ ಇರುವುದಾಗಿ ಹೇಳಿದ್ದಾರೆ. ಕಳೆದ ಐದು ತಿಂಗಳಿಂದ ಎರಡೂ ದೇಶಗಳ ಮಧ್ಯೆ ಎರಡು ಸುತ್ತಿನ ಮಾತುಕತೆಗಳಾಗಿವೆ. ಆದರೆ, ಸೆರೆಯಾಳುಗಳ ವಿನಿಮಯಕ್ಕೆ ಮಾತ್ರ ಸೀಮಿತವಾಗಿದೆ. ಈ ಶಾಂತಿ ಮಾತುಕತೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಝೆಲೆನ್ಸ್ಕಿ ಪ್ರಯತ್ನಿಸುತ್ತಿದ್ದಾರೆ.