Sunday, July 3, 2022

Latest Posts

ಬಡ ಕುಟುಂಬಕ್ಕೆ ಕಾರ್ಪೋರೇಟರ್ ನೆರವಿನ ಹಸ್ತ: ಸ್ವಂತ ಹಣದಲ್ಲಿಯೇ ಅಭಿವೃದ್ಧಿ

ಹೊಸದಿಗಂತ ವರದಿ,ಮಂಗಳೂರು:

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ವಾರ್ಡ್‌ನ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ತಮ್ಮ ಮಾನವೀಯ ಕಾರ್ಯದ ಮೂಲಕ ಈಗ ಸುದ್ದಿಯಲ್ಲಿದ್ದಾರೆ.

ತಮ್ಮದೇ ಖರ್ಚಿನಲ್ಲಿ ಬಡ ಕುಟುಂಬವೊಂದಕ್ಕೆ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಟ್ಟಿರುವ ಅವರು ಕರ್ತವ್ಯ ಬದ್ಧತೆ ಮೆರೆದಿದ್ದಾರೆ.
ಬೋಳೂರು ಕಲ್ಲಾವು ನಿವಾಸಿ ಮಾಲತಿ ಅವರು ತನ್ನ ಸಹೋದರಿಯ ಪುತ್ರನೊಂದಿಗೆ ವಾಸಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಅವರ ಮನೆಗೆ ವಿದ್ಯುತ್ ವ್ಯವಸ್ಥೆ ಇರಲಿಲ್ಲ. ನೀರಿನ ಸಂಪರ್ಕವೂ ಇರದೆ ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ತಿಳಿದ ಜಗದೀಶ್ ಅವರು ನೆರವಿಗೆ ಧಾವಿಸಿದ್ದರು.

ತಮ್ಮ ಸ್ವಂತ ಖರ್ಚಿನಿಂದ ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕೆ ವ್ಯವಸ್ಥೆ ಮಾಡಿದ್ದು, ಮನೆಗೆ ಪೈಂಟ್ ಮಾಡಿಸಿದ್ದಾರೆ. ಮನೆಯ ಕೆಲಸ ಪೂರ್ಣಗೊಂಡ ಬಳಿಕ ಈಗ ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತಿಯಲ್ಲಿ ಕುಟುಂದವರಿಗೆ ಮನೆಯನ್ನು ಹಸ್ತಾಂತರಿಸಿದ್ದಾರೆ. ಇವರ ಈ ಕಾರ್ಯ ಈಗ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss