ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಜಲಮಂಡಳಿ ನಿರ್ಲಕ್ಷ್ಯಕ್ಕೆಮಗುವೊಂದು ಬಲಿಯಾಗಿದೆ.
ಬೆಂಗಳೂರಿನ ನಗರದ ಬ್ಯಾಡರಹಳ್ಳಿಯಲ್ಲಿ ಬಿಡಬ್ಲ್ಯೂಎಸ್ ಎಸ್ ಬಿ ನಿರ್ಲಕ್ಷ್ಯದಿಂದಾಗಿ ದಂಪತಿ ತಮ್ಮ 2 ವರ್ಷದ ಮಗುವನ್ನು ಕಳೆದುಕೊಂಡಿದ್ದಾರೆ. ಕಾಮಗಾರಿಗೆ ಎಂದು ಗುಂಡಿ ತೆಗೆದು ಜಲಮಂಡಳಿ ಮುಚ್ಚದೆ ನಿರ್ಲಕ್ಷ್ಯ ತೋರಿದೆ.ಈ ಗುಂಡಿಗೆ ಮಗು ಬಿದ್ದು ಸಾವನ್ನಪ್ಪಿದೆ.
ಹನುಮಾನ್ ಹಾಗೂ ಹಂಸ ದಂಪತಿಯ ಕಾರ್ತಿಕ್ ಎಂಬ ಮಗು ಮೃತ ದುರ್ದೈವಿ. ಘಟನೆ ಸಂಬಂಧ ಜಲಮಂಡಳಿಯ ಇಂಜಿನಿಯರ್ ಹಾಗೂ ಕಾಂಟ್ರಾಕ್ಟರ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.