Sunday, June 26, 2022

Latest Posts

ಪಾನಿ ಪುರಿಯಲ್ಲಿ ರಿಂಗ್ ಇಟ್ಟು ‘ವಿಲ್ ಯೂ ಮ್ಯಾರಿ ಮಿ’ ಎಂದ ಪ್ರೇಮಿ: ಈ ಡಿಫರೆಂಟ್ ಮದುವೆ ಪ್ರಪೋಸಲ್ ಗೆ ಹರಿದು ಬಂತು ಭಾರೀ ಮೆಚ್ಚುಗೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೈಯಲ್ಲಿ ರೋಸ್ ಹಿಡಿದು, ಮಂಡಿಯೂರಿ ಕುಳಿತು ಪ್ರಪೋಸ್ ಮಾಡುವುದನ್ನು ನೋಡಿದ್ದೇವೆ, ಡೆಸ್ಕ್ ಮೇಲೆ ತನ್ನ ಮನದ ಮಾತನ್ನು ಬರೆದು ಪ್ರೀತಿ ನಿವೇದಿಸುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಪ್ರೇಮಿ ಎಲ್ಲರಿಗಿಂತ ಡಿಫರೆಂಟ್ ಆಗಿ ಪ್ರಪೋಸ್ ಮಾಡಿದ್ದಾನೆ.

ಹೌದು.. ಈ ಪ್ರೇಮಿ ಹುಡುಗಿ ಇಷ್ಟ ಪಡುವ ಪಾನಿಪುರಿಯಲ್ಲಿ ರಿಂಗ್ ಇಟ್ಟು ‘ವಿಲ್ ಯೂ ಮ್ಯಾರಿ ಮಿ’ ಎಂದಿದ್ದಾನೆ. ಆಕೆಗೆ ಯಾವ ಪುರಿಯಲ್ಲಿ ರಿಂಗ್ ಇದೆ ಎಂದು ಹುಡುಕುವುದೇ ದೊಡ್ಡ ಸರ್ಕಸ್ ಆಗಿತಂತೆ.

ಇದೀಗ ಈ ಜೋಡಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ಈ ವೆಡ್ಡಿಂಗ್ ಪ್ರೊಪೋಸ್‌ನ ಚಿತ್ರಗಳು ಟ್ವಿಟರ್‌ನಲ್ಲಿರುವ ‘ಮಂತ್ಲಿ ಅಂದಾಝ್ ಎ ಜಹಾನ್’ ಪುಟದಲ್ಲಿ ಶೇರ್‌ ಮಾಡಲಾಗಿದೆ.

ಈ ಫೋಟೋಕ್ಕೆ ಸಾವಿರಾರು ಲೈಕ್ಸ್, ಕಮೆಂಟ್ಸ್ ಬಂದಿದ್ದು, ಕೆಲವರು ‘ರಬ್ ನೇ ಬನಾದಿ ಜೋಡಿ’ ಎಂದು ಕಮೆಂಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss