Sunday, February 5, 2023

Latest Posts

ಐಪಿಎಸ್ ಅಧಿಕಾರಿ ಅಮಿತ್ ಲೋಧಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ವೆಬ್ ಸೀರೀಸ್ ಖಾಕೀ: ದಿ ಬಿಹಾರ ಚಾಪ್ಟರ್ ನ ಮೂಲಕ ಹೆಸರು ಗಳಿಸಿದ್ದ ಬಿಹಾರ ಕೇಡರ್ ಐಪಿಎಸ್ ಅಧಿಕಾರಿ ಅಮಿತ್ ಲೋಧಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988 ಹಾಗೂ ಇನ್ನಿತರ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ ವಿಯು ಎಸ್ ಪಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಲೋಧಾ ವಿರುದ್ಧ ಕೇಳಿಬಂದಿರುವ ಆರೋಪವನ್ನು ಪರಿಶೀಲನೆ ಮಾಡಲಾಗಿದ್ದು, ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವೈಯಕ್ತಿಕ ಲಾಭಕ್ಕಾಗಿ ಲೋಧಾ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಸರ್ಕಾರಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರೂ ನೆಟ್ಫ್ಲಿಕ್ಸ್ ಹಾಗೂ ಫ್ರೈಡೇ ಸ್ಟೋರಿ ಟೆಲರ್ ಜೊತೆಗೆ ಆರ್ಥಿಕ ಲಾಭಕ್ಕಾಗಿ ಒಪ್ಪಂದಕ್ಕೆ ಮುಂದಾಗಿರುವುದು ಲೋಧಾ ವಿರುದ್ಧದ ಪ್ರಮುಖ ಆರೋಪವಾಗಿದೆ. ಹೀಗಾಗಿ ಪೊಲೀಸ್ ಅಧಿಕಾರಿ ಲೋಧಾ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ರ ಸೆಕ್ಷನ್ 13 (1), ಸೆಕ್ಷನ್ 13(2) ಸೆಕ್ಷನ್ 12 ರ ಅಡಿಯಲ್ಲಿ ಹಾಗೂ ಐಪಿಸಿಯ 168 ಹಾಗೂ 120(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಲೋಧಾ ಪುಸ್ತಕ ಬಿಹಾರ ಡೈರೀಸ್ ನ ಆಧಾರವಾಗಿಟ್ಟುಕೊಂಡು ವೆಬ್ ಸರಣಿ ಒಂದು ಮಾಡಲಾಗಿತ್ತು, ಈ ವೆಬ್ ಸರಣಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿತ್ತು. ಬಿಹಾರ ಚಾಪ್ಟರ್, ಶೇಖ್ ಪುರ ಹಾಗೂ ಅದರ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಯೋತ್ಪಾದನೆ ನಡೆಸುತ್ತಿದ ನಟೋರಿಯಸ್ ಗ್ಯಾಂಗ್ ಸ್ಟರ್ ಒಬ್ಬನ ಕಥೆಯಾಗಿದೆ. ಈಗ ಈ ಬಿಹಾರ ಚಾಪ್ಟರ್ ಮೂಲಕ ಜನರ ಮನಗೆದ್ದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!