ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇನ್ನು ತೆಲುಗು ಆಡಿಯನ್ಸ್‌ಗೂ ಮನರಂಜನೆ ನೀಡಲು ಟೀಂ ಸಜ್ಜಾಗಿದೆ. ಬಾಯ್ಸ್ ಹಾಸ್ಟೆಲ್ ಹೆಸರಿನಲ್ಲಿ ಸಿನಿಮಾ ಡಬ್ ಆಗಿದ್ದು, ಇದರಲ್ಲಿ ರಮ್ಯಾ ಬದಲು ರಶ್ಮಿ ಗೌತಮ್ ಈ ಪಾತ್ರದಲ್ಲಿ ಕಾಣಿಸಲಿದ್ದಾರೆ.
ಸಿನಿ ದಿಗ್ಗಜರು ನಟಿಸಿದ್ದ ಕಾರಣ ಸಿನಿಮಾ ಹೈಪ್ ಹೆಚ್ಚಾಗಿತ್ತು. ಅದರಲ್ಲಿಯೂ ನಟಿ ರಮ್ಯಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಗೆಲ್ಲೋಕೆ ಇನ್ನೊಂದು ಕಾರಣ. ಆದರೆ ಸಿನಿಮಾ ರಿಲೀಸ್‌ಗೂ ಮುನ್ನವೇ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ತೆಲುಗಿನಲ್ಲಿ ರಮ್ಯಾ ಪಾತ್ರವೇ ಇರೋದಿಲ್ಲ. ರಮ್ಯಾ ಬದಲು ರಶ್ಮಿ ಗೌತಮ್‌ರನ್ನು ಆಯ್ಕೆ ಮಾಡಲಾಗಿದೆ.