ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಬೇಹುಗಾರಿಕಾ ಹಡಗು ಹಿಂದೂ ಮಹಾಸಾಗರವನ್ನು ಪ್ರವೇಶಿಸಿದೆ.
ಶಕ್ತಿಶಾಲಿ ಬೇಹುಗಾರಿಕಾ ಹಡಗು ಶಿಯಾನ್ 6 ಹಿಂದೂ ಮಹಾಸಾಗರದತ್ತ ಸಾಗುತ್ತಿದ್ದು, ಈ ಬಗ್ಗೆ ಶ್ರೀಲಂಕಾ ‘ಮಿಕ್ಸ್ಡ್ ಸಿಗ್ನಲ್ಸ್’ ನೀಡಿದೆ. ಚೀನಾದ ಹಡಗು ಪ್ರವೇಶಕ್ಕೆ ಮುನ್ನ ಅನುಮತಿ ಪಡೆದಿದೆಯೋ ಇಲ್ಲವೋ ಎನ್ನುವುದು ಅಸ್ಪಷ್ಟವಾಗಿದೆ.
ಇದೀಗ ಪ್ರಸ್ತುತ ಚೀನಾ ಹಡಗು ಹಿಂದೂಮಹಾಸಾಗರದ ಮಧ್ಯದಲ್ಲಿ 90 ಡಿಗ್ರಿ ಪೂರ್ವ ರೇಖಾಂಶದ ತುದಿಯಲ್ಲಿದೆ. ನಿರಂತರವಾಗಿ ಶ್ರೀಲಂಕಾ ಕಡೆ ತೆರಳುತ್ತಿದೆ.
2022 ರಲ್ಲಿ ಪೂರ್ವ ಹಿಂದೂ ಮಹಾಸಾಗರದಲ್ಲಿ ಹಡಗು ತನ್ನ ಮೊದಲ ಪ್ರಯಾಣ ಮಾಡಿತ್ತು. ಶ್ರೀಲಂಕಾದ ವಿಕ್ರಮಸಿಂಘೆ ಸರ್ಕಾರ ಚೀನಾದ ಈ ಹಡಗು ನಿಲುಗಡೆ ಮಾಡಲು ಅನುಮತಿ ನೀಡಿದೆ. ತದನಂತರ ಈ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಶ್ರೀಲಂಕಾ ಅನುಮತಿ ಹಿಂಪಡೆದಿತ್ತು.