ಮಲಗಿದ್ದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು

ಹೊಸದಿಗಂತ ವರದಿ ಕಲಬುರಗಿ:

ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಭಾಗಮ್ಮ ಬಡದಾಳ ಎಂಬುವರು ತಮ್ಮ ಜಮೀನಿನಲ್ಲಿ ವಿಶ್ರಾಂತಿ ಪಡೆಯಲು ಮಲಗಿದ ವೇಳೆ ನಾಗರಹಾವು ಮೈಮೇಲೆ ಹೆಡೆ ಎತ್ತಿ ಕುಳಿತಿದೆ. ಮಹಿಳೆ ಏಳಲೂ ಆಗದೆ ಮಲಗಲು ಆಗದೆ ಭಯಭೀತಳಾಗಿದ್ದಾಳೆ. ಈ ವೇಳೆ ಮಹಿಳೆಯು ದೇವರ ಮೊರೆ ಹೋಗಿ ಶ್ರೀಶೈಲ ಮಲ್ಲಿಕಾರ್ಜುನನಲ್ಲಿ ಪ್ರಾರ್ಥಿಸುತ್ತ, ಕಾಪಾಡು ಮಲ್ಲಯ್ಯ, ಕಾಪಾಡು, ನೀ ಮಾಯ ಆಗು ನನ್ನಪ್ಪ, ಏ ಮಲಯ್ಯ ನೀ ಬಾರೋ, ಕಾಪಾಡೋ ಮಲ್ಲಯ್ಯ ಎಂದು ಪ್ರಾರ್ಥಿಸಿದ್ದಾಳೆ.

ಕೆಲಹೊತ್ತಿನ ನಂತರ ನಾಗರಹಾವು ಮಹಿಳೆ ಮೇಲಿಂದ ಸರಿದು ಅಲ್ಲಿಂದ ತೆರಳಿದೆ. ಈಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!