ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ಕಣ್ಣೇ ಅಧಿರಿಂದಿ’ ಖ್ಯಾತಿಯ ಗಾಯಕಿ ಮಂಗ್ಲಿ ವಿರುದ್ಧ ದಾಖಲಾಯ್ತು ದೂರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ದರ್ಶನ್​ ನಟನೆಯ ‘ರಾಬರ್ಟ್’ ಸಿನಿಮಾದ​ ತೆಲುಗು ಅವತರಣಿಕೆಯ ‘ಕಣ್ಣೇ ಅಧಿರಿಂದಿ’ ಹಾಡನ್ನು ಹಾಡಿ ಕರ್ನಾಟಕದ ಜನತೆಗೂ ಹೆಚ್ಚು ಪರಿಚಿತರಾಗಿರುವ ಗಾಯಕಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ.
ತೆಲುಗು ಜನಪದ ಹಾಡುಗಳನ್ನು ಹಾಡುವ ಮೂಲಕ ಗುರುತಿಸಿಕೊಂಡವರು ಮಂಗ್ಲಿ. ತೆಲುಗು ನಾಡಿನ ಸಂಸ್ಕೃತಿಗೆ ಸರಿ ಹೊಂದುವ ಸಾಕಷ್ಟು ಹಾಡುಗಳನ್ನು ಹಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿಕೊಂಡಿದ್ದಾರೆ .
ತೆಲುಗು ರಾಜ್ಯಗಳಲ್ಲಿ ಈಗ ಬೊನಾಲು ಹಬ್ಬದ ಸಮಯ. ಈ ವಿಶೇಷ ಸಂದರ್ಭದಲ್ಲಿ ಮಂಗ್ಲಿ ‘ಬೊನಾಲು…’ ಹಾಡನ್ನು ಹಾಡಿ, ನೃತ್ಯ ಮಾಡಿದ್ದಾರೆ. ಈ ಹಾಡಿನಿಂದ ಕೆಲವರು ಬೇಸರಗೊಂಡರೆ, ಇನ್ನೂ ಕೆಲವರು ಈ ಹಾಡು ದೇವರಿಗೆ ಅವಮಾನ ಮಾಡುವ ರೀತಿಯಲ್ಲಿದೆ ಎಂದು ತಕರಾರು ತೆಗೆದಿದ್ದಾರೆ.
‘ನೀವು ಅಮ್ಮನ ಬಗ್ಗೆ ಹಾಗೆ ಮಾತನಾಡುತ್ತೀರಾ? ಭಕ್ತಿಯ ಹೆಸರಿನಲ್ಲಿ ದೇವರಿಗೆ ಅಪಹಾಸ್ಯ ಮಾಡಬೇಡಿ’ ಎಂದು ಅನೇಕರು ಕಮಂಟ್​ ಮಾಡಿದ್ದಾರೆ. ‘ಭಕ್ತರ ಭಾವನೆ ನೋಯಿಸಿದ ಮಂಗ್ಲಿ ತೆಲಂಗಾಣ ಜನರ ಬಳಿ ಕ್ಷಮೆಯಾಚಿಸಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ, ಮಂಗ್ಲಿ ವಿರುದ್ಧ ಹೈದರಾಬಾದ್​ನ ಬಿಜೆಪಿ ಕಾರ್ಪೊರೇಟರ್​ಗಳು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss