ಬಿಗ್ ಬಾಸ್ ಮೇಲೆ ಕೇಸ್ ಹಾಕ್ತೀನಿ ಎಂದ ಸ್ಪರ್ಧಿ ಶೋ ನಿಂದಲೇ ಎಲಿಮಿನೇಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹಿಂದಿ ‘ಬಿಗ್ ಬಾಸ್ 18’ ಶೋ ವಿರುದ್ಧ ನಟಿ, ನಿರೂಪಕಿ ಸಾರಾ ಅರ್ಫೀನ್​ ಖಾನ್​ ಗುಡುಗಿದ್ದು, ಶೋ ವಿರುದ್ಧವೇ ಅವರು ಕೇಸ್​ ಹಾಕುವುದಾಗಿ ಬೆದರಿಸಿದ್ದಾರೆ. ಇದರ ಬೆನ್ನಲ್ಲೇ ಈ ವಾರ ಅವರಿಗೆ ವೀಕ್ಷಕರಿಂದ ಕಡಿಮೆ ವೋಟ್ ಬಂದ ಕಾರಣ ಎಲಿಮಿನೇಟ್ ಮಾಡಲಾಗಿದೆ.

ಇತ್ತೀಚೆಗೆ ಒಂದು ಟಾಸ್ಕ್​ ವೇಳೆ ಸಾರಾ ಅರ್ಫೀನ್​ ಖಾನ್ ಅವರು ಅನರ್ಹರಾದರು. ಇದರಿಂದ ಅವರಿಗೆ ಕೋಪ ಬಂತು. ಇನ್ನುಳಿದ ಸ್ಪರ್ಧಿಗಳನ್ನು ಅವರು ತಳ್ಳಾಡಿದರು. ಅವರ ವರ್ತನೆಯಿಂದ ಗಲಾಟೆ ಶುರುವಾಯಿತು. ಬೇರೆ ಸ್ಪರ್ಧಿಗಳಿಗೆ ಪೆಟ್ಟಾಗಲು ಕೂಡ ಶುರುವಾಯಿತು. ಆಗ ಕರಣ್ ವೀರ್​ ಮೆಹ್ರಾ ಅವರು ಬಂದು ಸಾರಾನ ತಡೆಯಲು ಪ್ರಯತ್ನಿಸಿದರು.

Bigg Boss 18: Sara Arfeen Khan's FIRST Interview, 'Meri Family Aur Bachho  Par Matt Jana' - Exclusive | Times Nowಕರಣ್ ವೀರ್​ ಮೆಹ್ರಾ ಮಧ್ಯ ಪ್ರವೇಶಿಸಿದ್ದರಿಂದ ಸಾರಾ ಅರ್ಫೀನ್​ ಖಾನ್​ ವಿಪರೀತ ಸಿಟ್ಟು ಮಾಡಿಕೊಂಡರು. ಈ ವೇಳೆ ಅವರು ಕೆಳಗೆ ಬಿದ್ದರು. ತಾವು ಬೀಳಲು ಕರಣ್ ಕಾರಣ ಎಂದು ಸಾರಾ ಆರೋಪ ಮಾಡಿದರು. ‘ಕರಣ್ ನನ್ನ ಮೇಲೆ ಕೈ ಮಾಡಿದ್ದಾನೆ. ಆತನ ಮೇಲೆ ಬಿಗ್ ಬಾಸ್ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾನು ನನ್ನ ಲಾಯರ್​ ಸಂಪರ್ಕ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಯಾವ ಸ್ಪರ್ಧಿ ಕೂಡ ಬಿಗ್ ಬಾಸ್ ವಿರುದ್ಧವೇ ಕೇಸ್ ಹಾಕುವ ಬಗ್ಗೆ ಮಾತನಾಡುವುದಿಲ್ಲ. ಆದರೆ ಸಾರಾ ಅರ್ಫೀನ್​ ಖಾನ್ ಅವರು ಆ ಹಂತಕ್ಕೆ ಹೋಗಿದ್ದಾರೆ. ಆದ್ದರಿಂದ ಅವರನ್ನು ಹೊರಗೆ ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್​ 18’ ಶೋ ನಡೆಸಿಕೊಡುತ್ತಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!