SHOCKING | ತಲೆಯನ್ನೇ ದೇವರಿಗೆ ಅರ್ಪಿಸಿದ ದಂಪತಿ, ಮನೆಯಲ್ಲೇ ತಲೆ ಕತ್ತರಿಸುವ ಮಶೀನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ದಂಪತಿ ದೇವರಿಗಾಗಿ ತಮ್ಮ ಪ್ರಾಣ ನೀಡಿರುವ ಶಾಕಿಂಗ್ ಘಟನೆ ನಡೆದಿದೆ. ಹೇಮುಭಾಯ್ ಮಕ್ವಾನಾ ಹಾಗೂ ಪತ್ನಿ ಹನ್ಸಾಬೆನ್ ದೇವರ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದರು. ತಮ್ಮ ದೇಹವನ್ನು ದೇವರಿಗೆ ಅರ್ಪಿಸಲೆಂದು ಈ ದಂಪತಿ ಮನೆಯಲ್ಲೇ ತಲೆ ಕತ್ತರಿಸುವ ಯಂತ್ರ ಇರಿಸಿಕೊಂಡಿದ್ದರು.

ಸಿನಿಮಾಗಳಲ್ಲಿ ನೋಡುವ ರೀತಿ ಘಟನೆ ನಡೆದಿದ್ದು, ಯಂತ್ರದ ಮುಂದೆ ಬೆಂಕಿಯನ್ನು ಹಚ್ಚಿ ಇಟ್ಟು, ಒಟ್ಟಿಗೇ ಮಶೀನ್‌ನಲ್ಲಿ ತಲೆಯಿಟ್ಟಿದ್ದಾರೆ. ದಾರ ಎಳೆದು ಬಿಟ್ಟ ನಂತರ ಏಕಕಾಲಕ್ಕೆ ಬ್ಲೇಡ್ ಇಬ್ಬರ ತಲೆಯನ್ನೂ ಕಡಿದಿದೆ. ಎದುರಿದ್ದ ಬೆಂಕಿಗೆ ತಲೆಗಳು ಹಾರಿವೆ.

ಸ್ಥಳದಲ್ಲಿ ಪತ್ರವೊಂದು ದೊರೆತಿದ್ದು, ನಮ್ಮ ತಂದೆ ತಾಯಿ ಹಾಗೂ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕುಟುಂಬದವರ ಬಳಿ ಮನವಿ ಮಾಡಿದ್ದಾರೆ.

ಕಳೆದ ಕೆಲ ದಿನದಿಂದ ಭಕ್ತಿಯ ಪರಾಕಷ್ಠೆ ಹೆಚ್ಚಾಗಿದ್ದು, ಮನೆಯಲ್ಲಿ ನಾನಾ ರೀತಿ ಪೂಜೆಗಳನ್ನು ಮಾಡುತ್ತಲೇ ಇದ್ದರು, ಅದೇ ಪೂಜೆಯ ಕಡೆಯ ಭಾಗವಾಗಿ ಶಿರವನ್ನು ದೇವರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ತಮ್ಮ ತಲೆಯನ್ನು ದೇವರಿಗೆ ನೈವೇದ್ಯಕ್ಕೆ ಇಟ್ಟಿದ್ದೇವೆ ಎನ್ನುವುದು ದಂಪತಿ ಭಾವನೆಯಾಗಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!